ಕುಂಬಳಕಾಯಿ ರುಚಿಕರವಾದ ತರಕಾರಿ. ಇದು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹವಾಮಾನವು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಿದಾಗ ಇದರಿಂದ ಪರಿಹಾರ ಪಡೆಯಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
ಕುಂಬಳಕಾಯಿ ಶುಷ್ಕ ಮತ್ತು ಹಾನಿಗೊಳಗಾದ ಕೂದಲಿಗೆ ಹೊಳಪು ಮತ್ತು ತೇವಾಂಶವನ್ನು ನೀಡುತ್ತದೆ. 2 ಕಪ್ ಬೇಯಿಸಿದ ಕುಂಬಳಕಾಯಿ, 1 ಚಮಚ ತೆಂಗಿನೆಣ್ಣೆ, 1 ಚಮಚ ಜೇನುತುಪ್ಪ, 1 ಚಮಚ ಮೊಸರು ಬೆರೆಸಿ ನಿಮ್ಮ ಕೂದಲಿಗೆ ಸುಮಾರು 30 ನಿಮಿಷಗಳ ಕಾಲ ಬಿಡಿ. ಬಳಿಕ ಕೂದಲನ್ನು ತೊಳೆಯಿರಿ.
ಹಾಗೇ ಮುಖದ ಕಾಂತಿ ಹೆಚ್ಚಿಸಲು 1 ಚಮಚ ಕುಂಬಳಕಾಯಿ ರಸಕ್ಕೆ, 1 ಚಮಚ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ ಬಳಿಕ ವಾಶ್ ಮಾಡಿ. ಇಲ್ಲವಾದರೆ 2 ಚಮಚ ಕುಂಬಳಕಾಯಿ ತಿರುಳಿಗೆ ¼ ಚಮಚ ಹಾಲು, ½ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ.