ಬೆಂಗಳೂರು: ಕೆಎಂಎಫ್ ತುಪ್ಪದ ದರವನ್ನು ಏರಿಕೆ ಮಾಡಲಾಗಿದೆ. ಕಳೆದು ಒಂದು ತಿಂಗಳಿನಿಂದ 100 ರೂಪಾಯಿ ಏರಿಕೆ ಮಾಡಲಾಗಿದೆ.
ಒಂದು ತಿಂಗಳ ಹಿಂದೆ ಒಂದು ಕೆಜಿ ನಂದಿನಿ ತುಪ್ಪಕ್ಕೆ 470 ರೂ. ದರ ಇತ್ತು. ಪ್ರಸ್ತುತ ಒಂದು ಕೆಜಿ ತುಪ್ಪದ ದರ 570 ರೂ.ಗೆ ಏರಿಕೆಯಾಗಿದೆ.
ನಂದಿನಿ ತುಪ್ಪದ ದರವನ್ನು ಕೆಜಿಗೆ 30 ರೂ ನಷ್ಟು ಏರಿಕೆ ಮಾಡಲಾಗಿದೆ. ಒಂದು ಲೀಟರ್ ಸ್ಯಾಶೆ 518.18 ರೂ.ನಿಂದ 570 ರೂ.ಗೆ ಏರಿಕೆಯಾಗಿದೆ. ಒಂದು ಲೀಟರ್ ಪೆಟ್ ಜಾರ್ ದರ 536 36 ರೂ.ನಿಂದ 590 ರೂ.ಗೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಹಂತ ಹಂತವಾಗಿ ತುಪ್ಪದ ಬೆಲೆ ಏರಿಕೆ ಕಂಡಿದ್ದು, ಒಂದು ತಿಂಗಳ ಅವಧಿಯಲ್ಲಿ ಸುಮಾರು 100 ರೂಪಾಯಿ ಹೆಚ್ಚಳವಾಗಿದೆ.
ಹಾಲಿನ ದರವನ್ನು ಲೀಟರ್ ಗೆ 3 ರೂ. ನಷ್ಟು ಏರಿಕೆ ಮಾಡಲು ಕೆಎಂಎಫ್ ತೀರ್ಮಾನಿಸಿದೆ. ಈ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.