ದಕ್ಷಿಣ ಕೊರಿಯನ್ನರು ತಮ್ಮ ಕೃತಜ್ಞತೆ ಅರ್ಪಿಸುವ ಚುಸೋಕ್ ಹಬ್ಬದ ಸಂದರ್ಭದಲ್ಲಿ ‘ರಾಮ್-ಲೀಲಾ’ ಹಾಡುಗಳಿಗೆ ನೃತ್ಯ ಮಾಡಿದ್ದು, ನೆಟ್ಟಿಗರು ಪ್ರಭಾವಿತರಾಗಿದ್ದಾರೆ.
ಸಾಮಾನ್ಯವಾಗಿ ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ವೀಡಿಯೋಗಳನ್ನು ನೋಡುವುದು ನೆಟ್ಟಿಗರಿಗೆ ಸಂತೋಷಕರವಾಗಿರುತ್ತದೆ. ಭಾರತೀಯ ಹಾಡುಗಳು, ವಿಶೇಷವಾಗಿ ಬಾಲಿವುಡ್ ಚಲನಚಿತ್ರಗಳು, ಪ್ರಪಂಚದಾದ್ಯಂತ ಜನಪ್ರಿಯವಾಗಿವೆ ಮತ್ತು ವಿದೇಶಿಯರ ಗ್ರೂಪ್ಗಳ ಅನೇಕ ವೀಡಿಯೊಗಳು ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತದೆ.
ಅಂತಹ ಒಂದು ವೀಡಿಯೊವನ್ನು ದಕ್ಷಿಣ ಕೊರಿಯಾದ ಡಿಜಿಟಲ್ ಕಂಟೆಂಟರ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆರು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊ 1.3 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಯಾಗಿದೆ.
ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿರುವ ತಂಡ ತಮ್ಮ ಥ್ಯಾಂಕ್ಸ್ ಗಿವಿಂಗ್ ಹಬ್ಬದ ಸಮಯದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ 2013 ರ ಚಲನಚಿತ್ರ ‘ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ’ ಚಿತ್ರದ ‘ನಾಗಡ ಸಂಗ್ ಧೋಲ್’ ಮತ್ತು ‘ತತ್ತಡ್ ತಟ್ಟದ್’ ಹಾಡುಗಳಿಗೆ ಪ್ರದರ್ಶನ ನೀಡುವುದನ್ನು ಕಾಣಬಹುದು.
ಈವೆಂಟ್ ಅನ್ನು ಐಎಫ್ಎಸ್ಸಿ ಆಯೋಜಿಸಿದೆ. ಕೊರಿಯನ್ ಥ್ಯಾಂಕ್ಸ್ ಗಿವಿಂಗ್ ಹಬ್ಬವಾಗಿರುವ ಚುಸೋಕ್ ಹಬ್ಬವನ್ನು ಪೂರ್ವಭಾವಿಯಾಗಿ ಆಚರಿಸಲು ಇದನ್ನು ಆಯೋಜಿಸಲಾಗಿದೆ ಎಂದು ವೀಡಿಯೊದ ಶೀರ್ಷಿಕೆ ಹೇಳುತ್ತದೆ.
ಹಬ್ಬವನ್ನು ಹಂಗವಿ ಎಂದೂ ಸಹ ಕರೆಯುತ್ತಾರೆ, ಇದರರ್ಥ ಶರತ್ಕಾಲದ ಮಧ್ಯದ ಹಬ್ಬ ಅಥವಾ ಸುಗ್ಗಿಯ ಹಬ್ಬ. ದಕ್ಷಿಣ ಕೊರಿಯಾದಲ್ಲಿ ಮೂನ್ ಕ್ಯಾಲೆಂಡರ್ನ ಎಂಟನೇ ತಿಂಗಳ 15 ನೇ ದಿನದಂದು ಇದನ್ನು ಮೂರು ದಿನ ಆಚರಿಸಲಾಗುತ್ತದೆ. ನೆಟ್ಟಿಗರಂತೂ ವಿಡಿಯೋ ನೋಡಿ ಖುಷಿಪಟ್ಟು ಕಾಮೆಂಟ್ ಮಾಡಿದ್ದಾರೆ.