
ಮುಂದುವರಿದ ದೇಶಗಳಲ್ಲಿ ರೀಸೈಕಲ್ ಟ್ರಕ್ ಸಾಮಾನ್ಯ ಬಳಕೆಯಲ್ಲಿದೆ. ಕಸ ಸಂಗ್ರಹಣಾ ವಾಹನದಂತೆಯೇ ಬಳಸಲಾಗುತ್ತದೆ. ಉಪಯೋಗಿಸದೇ ತ್ಯಾಜ್ಯದ ರೀತಿ ಉಳಿದ ಮರು ಬಳಕೆ ಮಾಡಬಹುದಾದ ವಸ್ತುವನ್ನು ಕ್ರಶ್ ಮಾಡಿ ಕೊಂಡೊಯ್ಯಲಾಗುತ್ತದೆ.
ಇದೀಗ ಈ ರೀಸೈಕಲ್ ಟ್ರಕ್ ಚಾಲಕನಿಗೆ ಬಾಲಕ ಗಿಫ್ಟ್ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ರೀ ಸೈಕಲ್ ಟ್ರಕ್ ಚಾಲಕ ಉಡುಗೊರೆಯನ್ನು ಸ್ವೀಕರಿಸುವಾಗ ಹಾವಭಾವವೂ ವೀಕ್ಷಿಸಲು ಸಂತೋಷಕರವಾಗಿದೆ.
ತಂದೆಯ ತೋಳಿನಲ್ಲಿದ್ದ ಬಾಲಕ ಟ್ರಕ್ ನಿಲ್ಲುತ್ತಿದ್ದಂತೆ, ಚಾಲಕನಿಗೆ ಉಡುಗೊರೆಯನ್ನು ನೀಡುತ್ತಾನೆ. ಹುಡುಗನ ಔದಾರ್ಯಕ್ಕೆ ಧನ್ಯವಾದ ಹೇಳಲು, ಆ ವ್ಯಕ್ತಿ ಚಪ್ಪಾಳೆ ತಟ್ಟುವ ಸನ್ನೆಯನ್ನು ಹೋಲುವ ರೀತಿಯಲ್ಲಿ ಟ್ರಕ್ ಅನ್ನು ನಿರ್ವಹಿಸುತ್ತಾನೆ.
ಹುಡುಗ ಕೂಡ ಒಂದೇ ಸಮನೆ ಚಪ್ಪಾಳೆ ಹೊಡೆಯಲು ಪ್ರಾರಂಭಿಸುತ್ತಾನೆ. ಈ ವಿಡಿಯೊವನ್ನು ಒಂದು ದಿನದ ಹಿಂದೆ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದುವರೆಗೂ 1.16 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.