ಚಾಲಕ ಅಥವಾ ಪಾದಾಚಾರಿಗಳ ಅಜಾಗರೂಕತೆಯಿಂದಾಗಿ ರಸ್ತೆ ಅಪಘಾತಗಳು ಉಂಟಾಗುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅಪಘಾತಗಳ ಸಿಸಿ ಟಿವಿ ದೃಶ್ಯಾವಳಿಗಳ ಮೈ ಜುಮ್ ಎನಿಸುವಂತಹ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ.
ಇಂತದ್ದೇ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಳೆಯೊಬ್ಬಳು ಅತ್ಯಂತ ಬೇಜವಾಬ್ದಾರಿಯಿಂದ ರಸ್ತೆ ದಾಟುತ್ತಿರೋದನ್ನು ಕಾಣಬಹುದಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ಮಹಿಳೆಯರು ರಸ್ತೆ ದಾಟಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ನಡುವೆ ಒಬ್ಬ ಮಹಿಳೆ ಮಾತ್ರ ಹಿಂದೆ ಮುಂದೆ ಯೋಚಿಸದೇ ರಸ್ತೆ ದಾಟಲು ಯತ್ನಿಸುತ್ತಾಳೆ. ಈಕೆಯನ್ನು ಅಪಘಾತದಿಂದ ರಕ್ಷಿಸಲು ಯತ್ನಿಸಿದ ಎರಡು ಕಾರುಗಳು ಅಪಘಾತಕ್ಕೆ ಒಳಗಾಗಿವೆ.
ಅಜಾಗರೂಕ ಪಾದಚಾರಿ ಕಾರು ಅಪಘಾತದಿಂದ ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂಬ ಶೀರ್ಷಿಕೆಯನ್ನು ಈ ವಿಡಿಯೋಗೆ ನೀಡಲಾಗಿದೆ.