ಟೆಂಪಲ್ ಟೂರಿಸಂ, ಹೆಲ್ತ್ ಟೂರಿಸಂ, ವೈಲ್ಡ್ ಲೈಫ್ ಟೂರಿಸಂ ಹೀಗೆ ಬಗೆಬಗೆಯ ಕ್ಷೇತ್ರಕ್ಕೆ ಸಂಬಂಧಿಸಿದ ಟೂರಿಸಂ ಬಗ್ಗೆ ಕೇಳಿರುತ್ತೀರಿ, ಸ್ಲಮ್ ಟೂರಿಸಂ ಗೊತ್ತೇ?
ದೆಹಲಿಯಲ್ಲಿ ಇಂತಹ ವಿಲಕ್ಷಣ ಸ್ಲಂ ವಾಕಿಂಗ್ ಟೂರಿಸಂಗೆ ಜನರನ್ನು ಆಹ್ವಾನಿಸುವ ಪ್ಯಾಕೇಜ್ ಒಂದು ಕಾಣಿಸಿಕೊಂಡಿದ್ದು, ನೆಟ್ಟಿಗರು ವ್ಯಾಪಕವಾಗಿ ಈ ವ್ಯವಹಾರವನ್ನು ಟೀಕಿಸಿದ್ದಾರೆ.
ದೆಹಲಿಯಲ್ಲಿ ಅಂತಹ ಪ್ರವಾಸವನ್ನು ವ್ಯವಸ್ಥೆ ಮಾಡುವ ಕಂಪನಿಯ ಆಹ್ವಾನದ ಸ್ಕ್ರೀನ್ ಗ್ರಾಬ್ ಅನ್ನು ವ್ಯಕ್ತಿಯೊಬ್ಬರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಲಂ ಟೂರ್ಗೆ 1,800 ರೂ. ನಿಗದಿ ಮಾಡಿರುವುದು ಕಂಡುಬರುತ್ತದೆ.
ಇದು ಟ್ವಿಟರ್ನಲ್ಲಿ ಆಕ್ರೋಶ ಹುಟ್ಟುಹಾಕಿದೆ ಮತ್ತು ವ್ಯಾಪಕ ಚರ್ಚೆಗೂ ಕಾರಣವಾಯಿತು. ಇಂತಹ ಪ್ರವಾಸಗಳನ್ನು ವ್ಯವಸ್ಥೆ ಮಾಡುವ ಕೆಲವು ಸಂಸ್ಥೆಗಳು ಆದಾಯದ ಭಾಗವನ್ನು ಆ ಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ, ಎನ್ಜಿಒಗಳ ಮೂಲಕ ಅಥವಾ ಬೇರೆ ರೀತಿಯಲ್ಲಿ ಹೂಡಿಕೆ ಮಾಡುತ್ತವೆ ಎಂಬುದನ್ನು ಸಹ ಗಮನಿಸಬೇಕು. ಕೊಳೆಗೇರಿ ನಿವಾಸಿಗಳು ಆದಾಯದ ಸಾಧನವಾಗಿ ಆಯೋಜಿಸುವ ಯೋಜನೆಗಳಿಂದ ಇವುಗಳನ್ನು ಪ್ರತ್ಯೇಕಿಸಬೇಕು.
ಇಂತಹ ಪ್ರವಾಸಗಳು ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿವೆ, ಅದರಲ್ಲೂ ಮುಖ್ಯವಾಗಿ ಮುಂಬೈನ ಧಾರಾವಿ ಸ್ಲಮ್, ಸ್ಲಮ್ಡಾಗ್ ಮಿಲಿಯನೇರ್ ಚಿತ್ರದ ಯಶಸ್ಸಿನಿಂದ ಹೆಚ್ಚು ಜನಪ್ರಿಯವಾಯಿತು.
https://twitter.com/rishmunjall/status/1566321477657726976?ref_src=twsrc%5Etfw%7Ctwcamp%5Etweetembed%7Ctwterm%5E1566321477657726976%7Ctwgr%5E85b0cae29c965d6217a85ef8f85598a2fa6d7d3a%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fdelhi-slum-walking-tour-sparks-outrage-on-twitter-for-selling-idea-of-poverty-5891461.html