ಸೂಟುಬೂಟುಧಾರಿ ವಯೋ ವೃದ್ಧರೊಬ್ಬರು ತಮ್ಮೆಲ್ಲ ಜಂಜಡ ಮರೆತು ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಪ್ಪು ಸೂಟ್ ಧರಿಸಿದ 82 ವರ್ಷದ ವ್ಯಕ್ತಿ, ‘ಅಭಿ ತೋ ಪಾರ್ಟಿ ಶುರು ಹುಯಿ ಹೈ’ ಎಂಬ ಹಿಟ್ ಹಾಡಿಗೆ ಡ್ಯಾನ್ಸ್ ಮಾಡಿದ್ದು, ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಮಾತಿಗೆ ಜೀವಂತ ಉದಾಹರಣೆಯಾಗಿ ಕಾಣಿಸಿದ್ದಾರೆ.
ಅವರು ತಾವೆಷ್ಟು ತಮ್ಮ ನೃತ್ಯವನ್ನು ಆನಂದಿಸುತ್ತಿದ್ದಾರೆ ಎಂಬುದು ಅಲ್ಲಿ ಗಮನಾರ್ಹ ಸಂಗತಿ. ಅವರೊಟ್ಟಿಗೆ ಇನ್ನೊಬ್ಬ ಮಹಿಳೆ ಕೂಡ ಸ್ಟೆಪ್ ಹಾಕುತ್ತಿದ್ದು, ಅದು ಅವರ ಹೆಂಡತಿ ಎಂಬಂತೆ ತೋರುತ್ತದೆ.
ನೀಗಮ್ ಪಟೇಲ್ ಎಂಬುವರು ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ವಿಡಿಯೋದ ನಡುವೆ ಕಾಣಿಸಿಕೊಳ್ಳುವ ವ್ಯಕ್ತಿ, ಇದು ಅಂತಿಮ ಸುತ್ತು ! ಗೋಲ್ಡನ್ ಬಜರ್ !!! ಎಂದು ಹುರಿದುಂಬಿಸುವುದು ಕಾಣಿಸುತ್ತದೆ.
ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹಾರ್ಟ್ ಸಿಂಬಲ್ನೊಂದಿಗೆ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.