ಶುಕ್ರವಾರದಂದು ಪ್ರತಿಯೊಬ್ಬರು ಸಂಪತ್ತಿಗೆ ಅಧಿದೇವತೆಯಾದ ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಲಕ್ಷ್ಮೀ ದೇವಿ ಯಾವ ಮನೆಯಲ್ಲಿ ನೆಲೆಸಿರುತ್ತಾಳೋ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ , ಸಂಪತ್ತು ತುಂಬಿ ತುಳುಕುತ್ತದೆ. ಆದಕಾರಣ ಪ್ರತಿದಿನ ಲಕ್ಷ್ಮೀ ಪೂಜೆ ಮಾಡುವಾಗ ಈ ಹೂವನಿಟ್ಟು ಪೂಜೆ ಮಾಡಿ.
ಲಕ್ಷ್ಮೀದೇವಿ ಕಮಲದ ಮೇಲೆ ಕುಳಿತಿರುತ್ತಾಳೆ. ಆದ ಕಾರಣ ಆಕೆಗೆ ಕಮಲದ ಹೂ ಎಂದರೆ ತುಂಬಾ ಇಷ್ಟ. ಈ ಹೂವಿನಿಂದ ಪೂಜೆ ಮಾಡಿದರೆ ಆಕೆಯ ಅನುಗ್ರಹದಿಂದ ಸಕಲ ಸಂಪತ್ತು ಐಶ್ವರ್ಯ ನಮ್ಮದಾಗುತ್ತದೆ. ಆದರೆ ಈ ಹೂವು ಎಲ್ಲರಿಗೂ ಸಿಗುವುದು ಕಷ್ಟ.
ಆದ ಕಾರಣ ಲಕ್ಷ್ಮೀದೇವಿಗೆ ಪ್ರಿಯವಾದ ದಾಸವಾಳ ಹೂವಿನಿಂದ ಲಕ್ಷ್ಮೀದೇವಿಯ ಪೂಜೆ ಮಾಡಿ. ಸಾಮಾನ್ಯವಾಗಿ ದಾಸವಾಳ ಹೂ ಎಲ್ಲರ ಮನೆಯಲ್ಲೂ ಬೆಳೆಯುತ್ತಾರೆ. ಹಾಗಾಗಿ ಈ ಹೂವಲ್ಲಿ ಒಂದಾದರೂ ಹೂವನ್ನು ಪ್ರತಿದಿನ ಲಕ್ಷ್ಮೀದೇವಿಯ ಫೋಟೊದ ಮುಂದೆ ಇಟ್ಟು ಪೂಜಿಸಿ. ಇದರಿಂದ ಕಮಲದ ಹೂವಿಟ್ಟು ಪೂಜಿಸಿದಷ್ಟೇ ಫಲ ನಿಮಗೆ ಸಿಗುತ್ತದೆಯಂತೆ.