
ಪ್ರಮುಖ ರಸ್ತೆಗಳು ನೀರಿನಿಂದ ಆವೃತವಾಗಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ. ಕೆಲವೊಂದು ಬಡಾವಣೆಗಳಲ್ಲಿ ಬೋಟ್ ಮೇಲೆ ಸಂಚರಿಸುವಷ್ಟು ನೀರು ನಿಂತಿದೆ. ರಾಜ ಕಾಲುವೆಯ ಒತ್ತುವರಿಯೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಇದರ ಮಧ್ಯೆ ಕೆಲವೊಂದು ನಂಬಲಸಾಧ್ಯ ಘಟನೆಗಳು ನಡೆಯುತ್ತಿದ್ದು, ಮಳೆ ನೀರು ಹರಿಯುತ್ತಿದ್ದ ಪ್ರಮುಖ ರಸ್ತೆಯಲ್ಲಿ ಕ್ಯಾಟ್ ಫಿಶ್ ಸಿಕ್ಕಿದೆ. ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳ್ಳಂದೂರು ಬಳಿ ಈ ಕ್ಯಾಟ್ ಫಿಶ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.