ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಗಾಗಿ ದುಬೈನಲ್ಲಿ ದುಬಾರಿ ವಿಲ್ಲಾ ಖರಿಸಿದ್ದಾರೆ.
80 ಮಿಲಿಯನ್ ಡಾಲರ್ ಮೌಲ್ಯದ ಬೀಚ್ ಸೈಡ್ ವಿಲ್ಲಾ ಪ್ರಾಪರ್ಟಿ ಡೀಲ್ಗೆ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಹಿ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ದುಬೈನ ಪಾಮ್ ಜುಮೇರಾದಲ್ಲಿರುವ ಈ ದುಬಾರಿ ಆಸ್ತಿಯನ್ನು ಅಂಬಾನಿ ಕಿರಿಯ ಮಗ ಅನಂತ್ಗಾಗಿ ಈ ವರ್ಷದ ಆರಂಭದಲ್ಲಿ ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಮ್ಯಾನ್ಶನ್ ಪಾಮ್ ಆಕಾರದ ಕೃತಕ ದ್ವೀಪಸಮೂಹದ ಉತ್ತರ ಭಾಗದಲ್ಲಿದೆ. 10 ಮಲಗುವ ಕೋಣೆಗಳನ್ನು ಹೊಂದಿದೆ, ಖಾಸಗಿ ಸ್ಪಾ ಜೊತೆಗೆ ಒಳಾಂಗಣ ಮತ್ತು ಹೊರಾಂಗಣ ಪೂಲ್ಗಳನ್ನು ಹೊಂದಿದೆ.
ಕೆಲವು ಸಮಯದಿಂದ ಭಾರತ ಮತ್ತು ವಿದೇಶಗಳಲ್ಲಿನ ಗಣ್ಯರ ಆಯ್ಕೆ ದುಬೈ ಎನಿಸಿಕೊಂಡಿದೆ. ಅಲ್ಲಿನ ಸರ್ಕಾರವು ‘ಗೋಲ್ಡನ್ ವೀಸಾ’ಗಳನ್ನು ಒದಗಿಸುತ್ತಿದೆ ಮತ್ತು ಆಸ್ತಿ ಮಾಲೀಕತ್ವಕ್ಕಾಗಿ ನಿಯಮಗಳನ್ನು ಸಡಿಲಿಸುವ ಮೂಲಕ ವಿದೇಶಿ ಮನೆ ಖರೀದಿದಾರರನ್ನು ಸಕ್ರಿಯವಾಗಿ ಓಲೈಸುತ್ತಿದೆ.
ನಟ ಶಾರುಖ್ ಖಾನ್ ಮತ್ತು ಬ್ರಿಟಿಷ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹ್ಯಾಮ್ ಮತ್ತು ಅಂಬಾನಿ ನೆರೆಹೊರೆಯವರಾಗಬಹುದು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಂಬಾನಿ ಕುಟುಂಬವು ಮುಂಬೈನಲ್ಲಿ 27 ಅಂತಸ್ತಿನ ಗಗನಚುಂಬಿ ಕಟ್ಟಡಹೊಂದಿದ್ದು, ಅಲ್ಲಿ ಮೂರು ಹೆಲಿಪ್ಯಾಡ್ಗಳಿವೆ. ಸುಮಾರು 168 ಕಾರುಗಳಿಗೆ ಪಾರ್ಕಿಂಗ್, 50 ಆಸನಗಳ ಚಿತ್ರಮಂದಿರ, ಭವ್ಯವಾದ ಬಾಲ್ ರೂಂ ಮತ್ತು ಒಂಬತ್ತು ಎಲಿವೇಟರ್ಗಳನ್ನು ಸಹ ಹೊಂದಿದೆ.