ಟ್ವಿಟರ್ನಲ್ಲಿ ಸಕ್ರಿಯರಾಗಿದ್ದರೆ, ಅದರಲ್ಲೂ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರನ್ನು ಫಾಲೋ ಮಾಡುತ್ತಿದ್ದರೆ, ಅವರು ಭಾರತದ ಟ್ವಿಟರ್ ಗೆಳೆಯನನ್ನು ಹೊಂದಿದ್ದಾರೆಂದು ಬಹುಶಃ ಗಮನಿಸಿರಬಹುದು.
ಆಗೊಮ್ಮೆ ಈಗೊಮ್ಮೆ ಪುಣೆ ಮೂಲದ ಟೆಕ್ಕಿ ಪ್ರಣಯ್ ಪಾಥೋಲ್ ಅವರ ಖಾತೆಯ ಟ್ಯಾಗ್ ಅನ್ನು ಮಸ್ಕ್ ಉಲ್ಲೇಖಿಸುತ್ತಾರೆ. ಇಬ್ಬರೂ ಸಾಕಷ್ಟು ಒಳ್ಳೆಯ ಸ್ನೇಹಿತರು ಎಂಬುದು ಚರ್ಚೆಯಲ್ಲಿರುವ ವಿಚಾರ.
ಈಗ, ಪ್ರಣಯ್ ಪಾಥೋಲ್ ಅವರು ಟೆಕ್ಸಾಸ್ನಲ್ಲಿ ಮಸ್ಕ್ ಅವರನ್ನು ಭೇಟಿ ಮಾಡಿದ್ದು, ಫೋಟೋ ಶೇರ್ ಮಾಡಿದ್ದಾರೆ. ಇದು ದೇಸೀ ನೆಟ್ಟಿಗರಲ್ಲಿ ಮೆಚ್ಚುಗೆ ಹುಟ್ಟಿಸಿದೆ.
ಪ್ರಣರ್ ಪಾಥೋಲ್ ಅವರು ಗಿಗಾಫ್ಯಾಕ್ಟರಿ ಟೆಕ್ಸಾಸ್ನಲ್ಲಿ ಕ್ಲಿಕ್ ಮಾಡಿದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ತಾವು ತುಂಬಾ ಮೆಚ್ಚಿದ ವ್ಯಕ್ತಿಯನ್ನು ಭೇಟಿಯಾದ ಸಂತೋಷ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಗಿಗಾಫ್ಯಾಕ್ಟರಿ ಟೆಕ್ಸಾಸ್ನಲ್ಲಿ ನಿಮ್ಮನ್ನು ಭೇಟಿ ಮಾಡಿದ್ದು ತುಂಬಾ ಚೆನ್ನಾಗಿತ್ತು. ಅಂತಹ ವಿನಮ್ರ ವ್ಯಕ್ತಿಯನ್ನು ನೋಡಿಲ್ಲ. ನೀವು ಲಕ್ಷಾಂತರ ಜನರಿಗೆ ಸ್ಫೂತಿರ್ಯಾಗಿದ್ದೀರಿ ಎಂದು ಪಾಥೋಲ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಪೋಸ್ಟ್ಗೆ ಸಾವಿರಾರು ಲೈಕ್ ಕಾಮೆಂಟ್ ಬಂದಿದೆ.
https://twitter.com/PPathole/status/1561591196178419712?ref_src=twsrc%5Etfw%7Ctwcamp%5Etweetembed%7Ctwterm%5E1561591196178419712%7Ctwgr%5Ec56ad3b42f908e735b294de6fa63b0f5dbb6562a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felon-musk-finally-meets-his-online-friend-from-india-in-texas-desi-twitter-reacts-1991241-2022-08-22