ಮದುವೆಯ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿರುತ್ತದೆ, ವಧು – ವರರು ಹಾಗೂ ಕುಟುಂಬ ಸದಸ್ಯರಿಗೆ ಒಂದಷ್ಟು ಒತ್ತಡವೂ ಇರುತ್ತದೆ. ಹೀಗಾಗಿ ಸಣ್ಣಪುಟ್ಟ ತಪ್ಪುಗಳು ಸಹಜ. ಆದರೆ, ಇಲ್ಲೊಂದು ಮಹಾ ಪ್ರಮಾದವಾಗಿದೆ. ಈ ತಪ್ಪು ಮಾಡಿಕೊಂಡಿದ್ದು ಮದುವೆಯಾಗುವ ವಧು ಎಂಬುದು ಅಚ್ಚರಿ ಸಂಗತಿ.
ವಧು ತನ್ನ ಮದುವೆಯ ಆಮಂತ್ರಣದಲ್ಲಾದ ಅಭಾಸವನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾಳೆ.
ಕುಟುಂಬದವರು, ಸ್ನೇಹಿತರು, ಅತಿಥಿಗಳಿಗೆ ಕಳಿಸಲಾದ ಮದುವೆಯ ಆಮಂತ್ರಣದಲ್ಲಿ ಸೇರಿಸಲಾದ ಯುಆರ್ಎಲ್ ವಯಸ್ಕ ಚಿತ್ರಗಳಿರುವ ಸೈಟ್ನದ್ದಾಗಿತ್ತು.
ಆಕೆ ತನ್ನ ಅಧಿಕೃತ ವಿವಾಹ ವೆಬ್ಸೈಟ್ಗೆ ಬದಲಾಗಿ ತನ್ನ ಅತಿಥಿಗಳನ್ನು ಎಕ್ಸ್-ರೇಟೆಡ್ ಪ್ಲಾಟ್ಫಾರ್ಮ್ಗೆ ನಿರ್ದೇಶಿಸಿದ್ದಳು. ಆಕೆ ತಾನು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದು, ಈ ಪೋಸ್ಟ್ ಸುಮಾರು 200 ಕೆ ವೀಕ್ಷಣೆಗಳನ್ನು ಗಳಿಸಿದೆ.
ಘಟನೆಯು ಕೆಲವು ಕುತೂಹಲಕಾರಿ ಚರ್ಚೆಗೆ ಕಾರಣವಾಯಿತು. ಕೊನೆಗೆ ಆಕೆ ಕುಟುಂಬ ಸದಸ್ಯರು ಸ್ನೇಹಿತರಲ್ಲಿ ಕ್ಷಮೆ ಯಾಚಿಸಿ ವಿಷಯವನ್ನು ಕೊನೆಗೊಳಿಸಿದ್ದಾಳೆ.