ಹೈವೇಗಳಲ್ಲಿ ಅಥವಾ ಅತಿ ಹೆಚ್ಚು ಜನನಿಬಿಡ ರಸ್ತೆಗಳಲ್ಲಿ ಫುಟ್ ಬ್ರಿಡ್ಜ್ ಮಾಡುವುದುಂಟು. ವಾಹನ ಸಂಚಾರ ಸರಾಗವಾಗಲು ಹಾಗೂ ಜನರು ರಸ್ತೆ ದಾಟಲು ಅನುಕೂಲ ಮಾಡಿಕೊಡುವುದು ಫುಟ್ ಬ್ರಿಡ್ಜ್ನ ಉದ್ದೇಶ.
ಆದರೆ, ಚಾಲಕನೊಬ್ಬ ಆಟೋರಿಕ್ಷಾವನ್ನು ಬ್ಯುಸಿಯಾದ ಮುಂಬೈ-ಅಹಮದಾಬಾದ್ ಹೆದ್ದಾರಿಯ ಮೇಲಿರುವ ಫುಟ್ ಬ್ರಿಡ್ಜ್ ಮೇಲೆ ಲೇನ್ ದಾಟಲು ಓಡಿಸಿದ್ದಾನೆ, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಸಾಹಸಕ್ಕೆ ಅಚ್ಚರಿ ವ್ಯಕ್ತಪಡಿಸಿ ಇದನ್ನು ಮಿಷನ್ ಇಂಪಾಸಿಬಲ್ ಎಂದೂ ಕರೆದಿದ್ದಾರೆ.
ವಿಡಿಯೊದ ಪ್ರಕಾರ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ನಲ್ಲಿ ಈ ಘಟನೆ ನಡೆದಿದೆ. ಚಾಲಕನನ್ನು ಹಿಡಿಯುವ ಪ್ರಯತ್ನ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ವಿಡಿಯೊವು ಜನರಿಂದ ಸಾಕಷ್ಟು ಲೈಕ್ ಪಡೆದುಕೊಂಡಿದೆ. ಅವರಲ್ಲಿ ಹಲವರು ಇದನ್ನು ಜನರು ಟ್ರಾಫಿಕ್ ನಿಯಮಗಳನ್ನು ಅಪಾಯಕಾರಿ ರೀತಿಯಲ್ಲಿ ಉಲ್ಲಂಘಿಸುವ ಉದಾಹರಣೆ ಎಂದು ಕರೆದಿದ್ದಾರೆ.