ಟ್ವಿಟರ್ ಬಳಕೆದಾರರು ಇತ್ತೀಚೆಗೆ ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಇದರ ಪರಿಣಾಮ ಇತ್ತೀಚೆಗಷ್ಟೇ ಅಮೀರ್ ಖಾನ್ ಅಭಿನಯದ ʼಲಾಲ್ ಸಿಂಗ್ ಚಡ್ಡಾʼ ಚಿತ್ರಕ್ಕೆ ಹಿನ್ನಡೆಯಾಗಿದೆ.
ವಿಚಿತ್ರವೆಂದರೆ ಟ್ವಿಟ್ಟರ್ ಬಳಕೆದಾರರು ಇದೀಗ ಹೃತಿಕ್ ರೋಷನ್ ಅವರ ಚಿತ್ರವನ್ನೂ ಬಹಿಷ್ಕರಿಸುವಂತೆ ಕರೆ ನೀಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ಕಾರಣ ಹೃತಿಕ್ ಅವರು ʼಲಾಲ್ ಸಿಂಗ್ ಚಡ್ಡಾʼ ಚಿತ್ರವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದನ್ನು ಕಂಡ ನೆಟ್ಟಿಗರು ಉರಿದುಬಿದ್ದಿದ್ದಾರೆ.
“ಲಾಲ್ ಸಿಂಗ್ ಚಡ್ಡಾವನ್ನು ಈಗಷ್ಟೇ ವೀಕ್ಷಿಸಿದ್ದೇನೆ. ಹೃದಯ ಕರಗಿತು. ಪ್ಲಸ್ ಮತ್ತು ಮೈನಸ್ ಹೊರತುಪಡಿಸಿ, ಈ ಚಲನಚಿತ್ರವು ಅದ್ಭುತವಾಗಿದೆ. ಈ ರತ್ನವನ್ನು ಮಿಸ್ ಮಾಡಿಕೊಳ್ಳಬೇಡಿ ಹುಡುಗರೇ ! ಈಗಲೇ ಹೋಗಿ. ಇದನ್ನು ವೀಕ್ಷಿಸಿ. ಇದು ಬ್ಯೂಟಿಫುಲ್ ” ಎಂದು ಹೃತಿಕ್ ಟ್ವೀಟ್ ಮಾಡಿದ್ದರು. ಇದರಿಂದ ನೆಟ್ಟಿಗರು ಕೆರಳಿದ್ದು, ಹೃತಿಕ್ ವಿರುದ್ಧ ಹರಿಹಾಯ್ದಿದ್ದಾರೆ.