alex Certify BIG NEWS: ʼಲಾಲ್ ​ಸಿಂಗ್​ ಚಡ್ಡಾʼ ಬೆಂಬಲಿಸಿದ್ದಕ್ಕೆ ಹೃತಿಕ್​ ರೋಷನ್‌ ಗೂ ತಟ್ಟಿದ ಬಾಯ್ಕಾಟ್‌ ಬಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಲಾಲ್ ​ಸಿಂಗ್​ ಚಡ್ಡಾʼ ಬೆಂಬಲಿಸಿದ್ದಕ್ಕೆ ಹೃತಿಕ್​ ರೋಷನ್‌ ಗೂ ತಟ್ಟಿದ ಬಾಯ್ಕಾಟ್‌ ಬಿಸಿ

ಟ್ವಿಟರ್​ ಬಳಕೆದಾರರು ಇತ್ತೀಚೆಗೆ ಬಾಲಿವುಡ್​ ಸಿನಿಮಾಗಳನ್ನು ಬಹಿಷ್ಕರಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಇದರ ಪರಿಣಾಮ ಇತ್ತೀಚೆಗಷ್ಟೇ ಅಮೀರ್​ ಖಾನ್​ ಅಭಿನಯದ ʼಲಾಲ್​ ಸಿಂಗ್​ ಚಡ್ಡಾʼ ಚಿತ್ರಕ್ಕೆ ಹಿನ್ನಡೆಯಾಗಿದೆ.

ವಿಚಿತ್ರವೆಂದರೆ ಟ್ವಿಟ್ಟರ್​ ಬಳಕೆದಾರರು ಇದೀಗ ಹೃತಿಕ್​ ರೋಷನ್​ ಅವರ ಚಿತ್ರವನ್ನೂ ಬಹಿಷ್ಕರಿಸುವಂತೆ ಕರೆ ನೀಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ಕಾರಣ ಹೃತಿಕ್​ ಅವರು ʼಲಾಲ್​ ಸಿಂಗ್​ ಚಡ್ಡಾʼ ಚಿತ್ರವನ್ನು ಬೆಂಬಲಿಸಿ ಟ್ವೀಟ್​ ಮಾಡಿದ್ದರು. ಇದನ್ನು ಕಂಡ ನೆಟ್ಟಿಗರು ಉರಿದುಬಿದ್ದಿದ್ದಾರೆ.

“ಲಾಲ್​ ಸಿಂಗ್​ ಚಡ್ಡಾವನ್ನು ಈಗಷ್ಟೇ ವೀಕ್ಷಿಸಿದ್ದೇನೆ. ಹೃದಯ ಕರಗಿತು. ಪ್ಲಸ್​ ಮತ್ತು ಮೈನಸ್​ ಹೊರತುಪಡಿಸಿ, ಈ ಚಲನಚಿತ್ರವು ಅದ್ಭುತವಾಗಿದೆ. ಈ ರತ್ನವನ್ನು ಮಿಸ್​ ಮಾಡಿಕೊಳ್ಳಬೇಡಿ ಹುಡುಗರೇ ! ಈಗಲೇ ಹೋಗಿ. ಇದನ್ನು ವೀಕ್ಷಿಸಿ. ಇದು ಬ್ಯೂಟಿಫುಲ್​ ” ಎಂದು ಹೃತಿಕ್​ ಟ್ವೀಟ್​ ಮಾಡಿದ್ದರು. ಇದರಿಂದ ನೆಟ್ಟಿಗರು ಕೆರಳಿದ್ದು, ಹೃತಿಕ್ ವಿರುದ್ಧ ಹರಿಹಾಯ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...