75 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಾರತೀಯ ಯೋಧರು ಸಿಯಾಚಿನ್ ಹಿಮನದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತೀಯ ಸೇನೆಯ ಫೈರ್ & ಫ್ಯೂರಿ ಕಾರ್ಪ್ಸ್ ಟ್ವಿಟರ್ನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದು ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಭಾರತೀಯ ಯೋಧರು ಧ್ವಜಾರೋಹಣ ಕಾರ್ಯಕ್ರಮಕ್ಕೆಂದು ಹಿಮದಿಂದ ಆವೃತವಾದ ಪರ್ವತದ ತುಂಬೆಲ್ಲ ಅಡ್ಡಾಡುತ್ತಿರುವುದನ್ನು ಕಾಣಬಹುದಾಗಿದೆ.
ಧ್ವಜಾರೋಹಣದ ಬಳಿಕ ಭಾರತೀಯ ಸೇನಾ ಪಡೆಗಳು ಸಿಯಾಚಿನ್ ಹಿಮನದಿಯಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸಿದೆ. ಅತ್ಯಂತ ಶೀತ ವಾತಾವರಣ ಭಾರತೀಯ ಯೋಧರ ಉತ್ಸಾಹಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟು ಮಾಡಿದಂತೆ ಕಂಡುಬರಲಿಲ್ಲ. ತ್ರಿವರ್ಣ ಧ್ವಜವು ಬಾನೆತ್ತರಕ್ಕೆ ಹಾರುತ್ತಿದ್ದಂತೆಯೇ ಭಾರತೀಯ ಸೇನೆಯ ಯೋಧರು ಸೆಲ್ಯೂಟ್ ಮಾಡುವ ಮೂಲಕ ಧ್ವಜವಂದನೆ ಸಲ್ಲಿಸಿದರು.
ಇತ್ತ ಇಂಡೋ – ಟಿಬೇಟಿಯನ್ ಪೊಲೀಸ್ ಸಿಬ್ಬಂದಿ ಕೂಡ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.