alex Certify ವಿಶ್ವದ ಅತಿ ಎತ್ತರದ ಯುದ್ಧ ಭೂಮಿಯಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿ ಎತ್ತರದ ಯುದ್ಧ ಭೂಮಿಯಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ವಿಡಿಯೋ ವೈರಲ್​

75 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಾರತೀಯ ಯೋಧರು ಸಿಯಾಚಿನ್​ ಹಿಮನದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಭಾರತೀಯ ಸೇನೆಯ ಫೈರ್​ & ಫ್ಯೂರಿ ಕಾರ್ಪ್ಸ್​​ ಟ್ವಿಟರ್​ನಲ್ಲಿ ವಿಡಿಯೋವನ್ನು ಶೇರ್​ ಮಾಡಿದ್ದು ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಭಾರತೀಯ ಯೋಧರು ಧ್ವಜಾರೋಹಣ ಕಾರ್ಯಕ್ರಮಕ್ಕೆಂದು ಹಿಮದಿಂದ ಆವೃತವಾದ ಪರ್ವತದ ತುಂಬೆಲ್ಲ ಅಡ್ಡಾಡುತ್ತಿರುವುದನ್ನು ಕಾಣಬಹುದಾಗಿದೆ.

ಧ್ವಜಾರೋಹಣದ ಬಳಿಕ ಭಾರತೀಯ ಸೇನಾ ಪಡೆಗಳು ಸಿಯಾಚಿನ್​ ಹಿಮನದಿಯಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸಿದೆ. ಅತ್ಯಂತ ಶೀತ ವಾತಾವರಣ ಭಾರತೀಯ ಯೋಧರ ಉತ್ಸಾಹಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟು ಮಾಡಿದಂತೆ ಕಂಡುಬರಲಿಲ್ಲ. ತ್ರಿವರ್ಣ ಧ್ವಜವು ಬಾನೆತ್ತರಕ್ಕೆ ಹಾರುತ್ತಿದ್ದಂತೆಯೇ ಭಾರತೀಯ ಸೇನೆಯ ಯೋಧರು ಸೆಲ್ಯೂಟ್​ ಮಾಡುವ ಮೂಲಕ ಧ್ವಜವಂದನೆ ಸಲ್ಲಿಸಿದರು.

ಇತ್ತ ಇಂಡೋ – ಟಿಬೇಟಿಯನ್​ ಪೊಲೀಸ್​ ಸಿಬ್ಬಂದಿ ಕೂಡ ಅರುಣಾಚಲ ಪ್ರದೇಶದ ತವಾಂಗ್​ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...