ತ್ರಿವರ್ಣ ಧ್ವಜಕ್ಕೆ ಆರತಿ ಎತ್ತಿ ಪೂಜೆ ಸಲ್ಲಿಸಿದ ವೃದ್ಧೆ: ಭೇಷ್ ಎಂದ ನೆಟ್ಟಿಗರು 16-08-2022 9:46AM IST / No Comments / Posted In: Latest News, India, Live News 75 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಭಾರತವು ಅದ್ಧೂರಿಯಾಗಿ ಆಚರಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇದೆ. ಇದೇ ಸಾಲಿನಲ್ಲಿ ವೃದ್ಧೆಯೊಬ್ಬರು ತ್ರಿವರ್ಣ ಧ್ವಜಕ್ಕೆ ಆರತಿ ಎತ್ತಿ ಪೂಜೆ ಸಲ್ಲಿಸುತ್ತಿರುವ ದೃಶ್ಯವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವಿನಾಶ್ ಶರಣ್ ಎಂಬವರು ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಮನೆಯ ಆವರಣದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದ ವೃದ್ಧೆಯು ಬಾವುಟಕ್ಕೆ ಪೂಜೆ ಸಲ್ಲಿಸುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋಗೆ ಅವಿನಾಶ್ ಶರಣ್ ‘ಗೌರವ’ ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೆ ಹರ್ ಘರ್ ತಿರಂಗ ಎಂಬ ಹ್ಯಾಶ್ಟ್ಯಾಗ್ನ್ನೂ ನೀಡಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ದೇಶದಲ್ಲಿ 20 ಕೋಟಿಗೂ ಅಧಿಕ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡಿದೆ. ಆಗಸ್ಟ್ 13ರಿಂದ 15ರವರೆಗೆ ಕೇಂದ್ರ ಸರ್ಕಾರವು ದೇಶದಲ್ಲಿ ʼಹರ್ ಘರ್ ತಿರಂಗಾʼ ಆಯೋಜಿಸಿತ್ತು. ಈ ವಿಡಿಯೋವನ್ನು ನೋಡಿದ ಟ್ವೀಟಿಗರು ತ್ರಿವರ್ಣ ಧ್ವಜದೆಡೆಗೆ ವೃದ್ಧೆಗೆ ಗೌರವ ಹಾಗೂ ಶ್ರದ್ಧೆಯನ್ನು ಕೊಂಡಾಡಿದ್ದಾರೆ. Respect.❤️#HARGHARTIRANGA pic.twitter.com/GFDjxpS0CZ — Awanish Sharan 🇮🇳 (@AwanishSharan) August 14, 2022