ಕ್ರಿಕೆಟಿಗ ರಾಸ್ ಟೇಲರ್ ತಮ್ಮ ಆತ್ಮ ಚರಿತ್ರೆ ‘ಬ್ಲಾಕ್ ಅಂಡ್ ವೈಟ್’ ಪುಸ್ತಕದಲ್ಲಿ ಹಲವು ಸ್ಪೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ನ್ಯೂಜಿಲೆಂಡ್ ತಂಡದಲ್ಲಿ ತಾವು ಜನಾಂಗೀಯ ನಿಂದನೆಗೆ ಒಳಗಾಗಿದ್ದಾಗಿಯೂ ಅವರು ಹೇಳಿಕೊಂಡಿದ್ದರು.
ಇದರ ಮಧ್ಯೆ ಈಗ ಮತ್ತೊಂದು ಶಾಕಿಂಗ್ ಸಂಗತಿ ಬಹಿರಂಗವಾಗಿದ್ದು, ಚುಟುಕು ಕ್ರಿಕೆಟ್ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ರಾಸ್ ಟೇಲರ್ ಆಟವಾಡುತ್ತಿದ್ದಾಗ ಅವರಿಗೆ ತಂಡದ ಮಾಲೀಕ ಕಪಾಳ ಮೋಕ್ಷ ಮಾಡಿದ್ದರಂತೆ.
2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ರಾಸ್ ಟೇಲರ್ ಶೂನ್ಯಕ್ಕೆ ಔಟ್ ಆಗಿದ್ದು, ಈ ಸಂದರ್ಭದಲ್ಲಿ ಡ್ರೆಸ್ಸಿಂಗ್ ರೂಮಿಗೆ ಬಂದ ರಾಜಸ್ಥಾನ್ ತಂಡದ ಮಾಲೀಕರೊಬ್ಬರು ನಾವು ನಿಮಗೆ ಇಷ್ಟೊಂದು ಹಣ ಪಾವತಿಸಿದ್ದು ಶೂನ್ಯಕ್ಕೆ ಔಟ್ ಆಗಲಾ ಎಂದು ಪ್ರಶ್ನಿಸಿ, ಮೂರರಿಂದ ನಾಲ್ಕು ಬಾರಿ ಕಪಾಳ ಮೋಕ್ಷ ಮಾಡಿದ್ದರಂತೆ. ವೃತ್ತಿಪರ ಕ್ರಿಕೆಟ್ ನಲ್ಲಿ ಇಂತಹ ಘಟನೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.