alex Certify ಪುಟ್ಟ ಬಾಲಕಿ ತನ್ನ ಶಿಕ್ಷಕರೊಂದಿಗೆ ಮಾರ್ಷಲ್​ ಆರ್ಟ್ಸ್​ ಅಭ್ಯಾಸ ಮಾಡುವ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕಿ ತನ್ನ ಶಿಕ್ಷಕರೊಂದಿಗೆ ಮಾರ್ಷಲ್​ ಆರ್ಟ್ಸ್​ ಅಭ್ಯಾಸ ಮಾಡುವ ವಿಡಿಯೋ ವೈರಲ್​

ಪುಟ್ಟ ಬಾಲಕಿಯೊಬ್ಬಳು ತನ್ನ ಮಾರ್ಗದರ್ಶಕರೊಂದಿಗೆ ಆತ್ಮರಕ್ಷಣೆಯ ಪಾಠಗಳನ್ನು ಕಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

ಆ ಪುಟ್ಟ ಹುಡುಗಿ ತನ್ನ ಜಿಯುಜಿಟ್ಸು ಕೌಶಲ್ಯದಂತೆ ತೋರುವ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ದಾಳಿಗಳನ್ನು ತಡೆಯುವುದರಿಂದ ಹಿಡಿದು ತಿರುಗಿಸಿ ಪಟ್ಟುಗಳನ್ನು ಹಾಕುವುದರಿಂದ ಹಿಡಿದು ವಿವಿಧ ರೀತಿಯಲ್ಲಿ ಕಸರತ್ತು ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.‌

ಆರಂಭದಲ್ಲಿ, ಪುಟ್ಟ ಮಂಚ್ಕಿನ್​ ದಾಳಿ ತಡೆಯುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ನಂತರ ತನ್ನ ಮಾರ್ಗದರ್ಶಕನನ್ನು ಕೆಳಗೆ ಬೀಳಿಸುವುದನ್ನೂ ನೋಡಬಹುದಾಗಿದೆ.

ಬೇರೆ ಬೇರೆ ಆಯಾಮದಲ್ಲಿ ತನ್ನ ಮಾರ್ಗದರ್ಶಕನನ್ನು ಕೆಡವಲು ಆ ಪುಟ್ಟ ಬಾಲಕಿ ಪ್ರಯತ್ನ ಮಾಡುತ್ತಾಳೆ. ಶಿಸ್ತುಬದ್ಧವಾಗಿ ಕಾಲು ಹಿಡಿದು ಜಗ್ಗುವುದು, ತೋಳುಗಳನ್ನು ಲಾಕ್​ ಮಾಡುವುದು ಗಮನ ಸೆಳೆಯುತ್ತದೆ.

ಆತ್ಮರಕ್ಷಣೆ ಕಲಿಯುವುದು ಹೊಸದೇನಲ್ಲ, ಇದು ಚಿಕ್ಕ ಹುಡುಗಿಯ ಪರಿಶ್ರಮ ಮತ್ತು ಸಮರ್ಪಣೆ ನೆಟ್ಟಿಗರಿಗೆ ಇಷ್ಟವಾಗಿದೆ. ಚಿಕ್ಕವಳಾಗಿದ್ದರೂ, ತನ್ನ ಸಮರ ಕಲೆಗಳ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ತಾನು ಹೇಗೆ ತಯಾರಿ ಮಾಡಿಕೊಳ್ಳಬೇಕೆಂದು ಯಶಸ್ವಿಯಾಗಿ ಕಲಿತಿದ್ದಾಳೆ ಎಂದು ಕ್ಲಿಪ್​ ಅನ್ನು ಹಂಚಿಕೊಂಡಿರುವ ಟ್ವಿಟರ್​ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

https://twitter.com/fun4laugh/status/1556928277360492544?ref_src=twsrc%5Etfw%7Ctwcamp%5Etweetembed%7Ctwterm%5E1556928277360492544%7Ctwgr%5E3ac8424355514e3acbac8b213258fd40f6c1bbba%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fvideo-of-little-girl-practising-martial-arts-with-her-teacher-goes-viral-netizens-call-it-empowering-5732935.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...