ಕಾರು ಕ್ಷೇತ್ರದ ದಿಗ್ಗಜ ಬಿಎಂಡಬ್ಲ್ಯು ತನ್ನ ಐಕಾನಿಕ್ ಜಿಎಂಬಿಎಚ್ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಭಾರತದಲ್ಲಿ “50 ಜಹ್ರೆ ಎಂ ಎಡಿಷನ್” ಬಿಡುಗಡೆ ಮಾಡಿದೆ, ಇದರ ಬೆಲೆ ರೂ. 1,52,90,000 (ಎಕ್ಸ್ ಶೋ ರೂಂ).
ಸಂಪೂರ್ಣ ಬಿಲ್ಟ್- ಅಪ್ ಯೂನಿಟ್ ನಲ್ಲಿ ಇದು ಲಭ್ಯವಿದ್ದು, ಸೀಮಿತ ಸಂಖ್ಯೆಯಲ್ಲಿ ವಾಹನವಿದೆ. ಬಿಎಂಡಬ್ಲು ಇಂಡಿಯಾ ಈ ಹಿಂದೆ 10 ವಿಶೇಷವಾದ ’50 ಜಹ್ರೆ ಎಡಿಷನ್ʼ ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.
ಈ ಕಾರಿನ ಹೊರ ಆವೃತಿಯಲ್ಲಿ ಕಿಡ್ನಿ ಗ್ರಿಲ್ನ ಮೇಲಿರುವ ಸಾಂಪ್ರದಾಯಿಕ ಬಿಎಂಡಬ್ಲ್ಯು ಲಾಂಛನ ವಾಹನ ಶ್ರೀಮಂತಿಕೆಯನ್ನು ಎತ್ತಿ ತೋರುವಂತಿದೆ. ಎಲ್ಇಡಿ ಲೇಸರ್ ಲೈಟ್ನೊಂದಿಗೆ ಅಡಾಪ್ಟಿವ್ ಹೆಡ್ಲೈಟ್ ಸ್ಟ್ಯಾಂಡರ್ಡ್ ಆಗಿ ಕಾಣಿಸುವಂತಿದೆ.
ಒಳಭಾಗದಲ್ಲಿ ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್, ಮೆಮೊರಿ ಫಂಕ್ಷನ್ನೊಂದಿಗೆ ಎಲೆಕ್ಟ್ರಿಕಲ್ ಸೀಟ್ ಹೊಂದಾಣಿಕೆ ಮತ್ತು ಎಲ್ಲಾ ಮಿರರ್ಗಳಲ್ಲಿ ಸ್ವಯಂಚಾಲಿತ ಆಂಟಿ-ಡ್ಯಾಝಲ್ ಫಂಕ್ಷನ್ ಜತೆಗೆ ಹಗುರವಾದ ಹೈಟೆಕ್ ಕಾರ್ಬನ್ ಫೈಬರ್ ರೀನ್ ಫೋರ್ಸ್ ಪಾಲಿಮರ್ ರೂಫ್ ಇದೆ.
ಲೈವ್ ಕಾಕ್ ಪಿಟ್ ಪ್ರೊಫೆಷನಲ್ 3 ಈ ನ್ಯಾವಿಗೇಶನ್, ಸ್ಟೀರಿಂಗ್ ವೀಲ್ ಹಿಂದೆ 12.3- ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಡಿಸ್ಪ್ಲೇ, ಮತ್ತು 10.25 -ಇಂಚಿನ ಕಂಟ್ರೋಲ್ ಡಿಸ್ ಪ್ಲೇ ಒಳಗೊಂಡಿದೆ. ಕನೆಕ್ಟ್ ಡ್ರೈವ್ ತಂತ್ರಜ್ಞಾನಗಳ ಹೋಸ್ಟ್ಗಳನ್ನು ಒದಗಿಸಲಾಗಿದೆ.
ವೈರ್ಲೆಸ್ ಚಾರ್ಜಿಂಗ್ ನೊಂದಿಗೆ ಹೆಡ್ ಅಪ್ ಡಿಸ್ಪ್ಲೇ, ಸ್ಮಾರ್ಟ್ಫೋನ್ ಇಂಟಿಗ್ರೇಷನ್, ಮುಂಭಾಗ ಮತ್ತು ಹಿಂಭಾಗದಲ್ಲಿ ಸೆನ್ಸರ್ಗಳೊಂದಿಗೆ ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್ನೊಂದಿಗೆ ಗಮನ ನೀಡುವ ಅಸಿಸ್ಟೆಂಟ್ ಮತ್ತು ಪಾರ್ಕಿಂಗ್ ಅಸಿಸ್ಟೆಂಟ್ ಸೇರಿದಂತೆ ಕಂಫರ್ಟ್ ಆಕ್ಸೆಸ್ ಸಿಸ್ಟಮ್, ಗೆಸ್ಚರ್ ಕಂಟ್ರೋಲ್, ಸ್ಟೀರಿಂಗ್ ಮತ್ತು ಲೇನ್ ಕಂಟ್ರೋಲ್ ಅಸಿಸ್ಟೆಂಟ್, ಹಾಗೆಯೇ ಡ್ರೈವ್ ರೆಕಾರ್ಡರ್ ಕೂಡ ಸೇರಿವೆ.