ಎರಡು ದಿನಗಳ ಹಿಂದೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಗುಡುಗು ಸಹಿತ ಗಾಳಿಯಿಂದ ಕಾಡ್ಗಿಚ್ಚು ಉಲ್ಬಣಗೊಂಡಿತು. ಇದಾದ ಬಳಿಕ ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಿಂಚು ಕಾಣಿಸಿದೆ.
ಫೋರ್ಟ್ ಜೋನ್ಸ್ನ ಪಶ್ಚಿಮಕ್ಕೆ 11 ಮೈಲುಗಳಷ್ಟು ದೂರದಲ್ಲಿ ಕ್ಲಾಮತ್ ರಾಷ್ಟ್ರೀಯ ಉದ್ಯಾನದಲ್ಲಿ ಈ ಟನೆ ನಡೆದಿದಿದ್ದು. ಬಿರುಗಾಳಿ ಕಾಣಿಸಿಕೊಂಡಿದ್ದು, ನಂತರ ಬೆಂಕಿ ಕಾಣಿಸಿದೆ.
ಬೆಂಕಿ ಅಬ್ಬರದ ನಡುವೆ ಅದೇ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಮಿಂಚು ಕಾಣಿಸಿದ್ದು ಈ ಸಂದರ್ಭ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಸಣ್ಣ ಕ್ಲಿಪ್ನಲ್ಲಿ ಬೆಂಕಿಯಿಂದಾಗಿ ಕೆಂಪಾಗಿ ಕಾಣುವ ಪ್ರದೇಶದಲ್ಲಿ ಮಿಂಚು ಹೊಡೆಯುವುದನ್ನು ಕಾಣಬಹುದು.
ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಮತ್ತು ಜನರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅರಣ್ಯ ಸೇವೆಯು ಫೇಸ್ಬುಕ್ನಲ್ಲಿ ಉಲ್ಲೇಖಿಸಲಾಗಿದ್ದು, ಅಂದಾಜು 30,000 ರಿಂದ 40,000 ಎಕರೆ ಪ್ರದೇಶವು ಬೆಂಕಿಯಲ್ಲಿ ಸುಟ್ಟುಹೋಗಿದೆ ಎಂದು ಮಾಹಿತಿ ನೀಡಿದೆ.
ಬೆಂಕಿಯ ಪ್ರದೇಶದಲ್ಲಿ ಕ್ಯುಮುಲಸ್ ಮೋಡಗಳು ಅಭಿವೃದ್ಧಿಗೊಳ್ಳುತ್ತಿವೆ, ಇದು ಬೆಂಕಿಯನ್ನು ಉಲ್ಬಣಗೊಳಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಬೆಂಕಿ ಇನ್ನಷ್ಟು ವ್ಯಾಪಿಸುವುದನ್ನು ತಡೆಯಲು ವಿಮಾನದ ಮೂಲಕ ಬೆಂಕಿ ನಂದಿಸುವ ಕೆಲಸ ಮುಂದುವರಿದಿದೆ.
ಶನಿವಾರ ಸಿಸ್ಕಿಯು ಕೌಂಟಿಯ ಕೆಲವು ಭಾಗಗಳಿಂದ ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸುವ ಆದೇಶವನ್ನು ಸಹ ನೀಡಲಾಗಿದೆ.