ಕಲಬುರ್ಗಿಯಲ್ಲಿರುವ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಭೀಮಾ ಪಲ್ಸ್ ಹೆಸರಿನಲ್ಲಿ ಸರ್ಕಾರಿ ಬ್ರಾಂಡ್ ತೊಗರಿ ಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಕೆಎಂಎಫ್ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯುವಂತೆ ಭೀಮಾ ತೊಗರಿ ಬೇಳೆ ಮಾರುಕಟ್ಟೆಯಲ್ಲಿ ಸಿಗಲಿದೆ. ಬೇಳೆ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡಲು ರಾಜ್ಯ ಸರ್ಕಾರ 2 ಕೋಟಿ ರೂ. ಮತ್ತು ದಾಲ್ ಮಿಲ್ ಆರಂಭಿಸಲು ಕೇಂದ್ರ ಸರ್ಕಾರದಿಂದ 6 ಕೋಟಿ ರೂ.ಗಳನ್ನು ತೊಗರಿ ಅಭಿವೃದ್ಧಿ ಮಂಡಳಿಗೆ ಬಿಡುಗಡೆ ಮಾಡಲಾಗಿದೆ.
ಮಾರುಕಟ್ಟೆಯಲ್ಲಿ ಅನೇಕ ಬ್ರಾಂಡ್ ಗಳ ತೊಗರಿ ಬೇಳೆ ಲಭ್ಯ ಇವೆ. ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಯಿಂದ ಗುಣಮಟ್ಟದ ಖಾತರಿಯೊಂದಿಗೆ ಕೈಗೆಟುಕುವ ದರದಲ್ಲಿ ತೊಗರಿ ಬೇಳೆ ಸಿಗಲಿದೆ. ಇದರಿಂದ ರೈತರಿಗೆ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.