ಮಹೇಶ್ ಬಾಬು ನಿರ್ದೇಶನದ ಬಹುನಿರೀಕ್ಷಿತ ‘ಅಪರೂಪ’ ಚಿತ್ರದ ‘ಅನಿಸಿದೆ ಏಕೋ’ ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಅರ್ಮನ್ ಮಲ್ಲಿಕ್ ಹಾಗೂ ಸಂಗೀತಾ ರವೀಂದ್ರನಾಥ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದಿದ್ದು, ಪ್ರಜ್ವಲ್ ಪಾಯ್ ಸಂಗೀತಕ್ಕೆ ಗಾನ ಪ್ರಿಯರು ಫಿದಾ ಆಗಿದ್ದಾರೆ.
ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರವನ್ನು ಕೆಆರ್ ಮಹೇಶ್ ನಿರ್ಮಾಣ ಮಾಡಿದ್ದು, ಸುಘೋಷ್ ಸೇರಿದಂತೆ ರಿತಿಕಾ ಶ್ರೀನಿವಾಸ್, ಅರುಣ ಬಾಲರಾಜ್, ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಸಿದ್ಧವಾಗಿದೆ