ತೂಕ ಇಳಿಸಿಕೊಳ್ಳಲು ವೈದ್ಯರ ಸಲಹೆ ಪಡೆಯುವುದು, ಅವರ ಹೇಳಿದಂತೆ ಡಯಟ್ ಮಾಡುವುದು, ಆಹಾರ ಕ್ರಮ ಅನುಸರಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಇಲ್ಲೊಬ್ಬ ವೈದ್ಯರು ನೀಡಿದ ಡಯಟ್ ಲಿಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ವೈದ್ಯರು ಸೂಚಿಸಿದ “ಡಯಟ್ ಟು ಬಿ ಫಾಲೋಡ್” ಅಡಿಯಲ್ಲಿ ಉಲ್ಲೇಖಿಸಲಾದ ಆಹಾರಗಳ ಪಟ್ಟಿಯಲ್ಲಿನ ಅಂಶಗಳು ವಿಲಕ್ಷಣವಾಗಿದೆ ಎಂಬ ಟೀಕೆಗಳು ಬಂದಿವೆ. ತೂಕವನ್ನು ಕಳೆದುಕೊಳ್ಳಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ವೈದ್ಯರ ಸಲಹೆಯನ್ನು ಪಡೆದ ಈ ವ್ಯಕ್ತಿಯು ನಿಖರವಾಗಿ ಏನು ಮಾಡಿದ್ದಾನೆ ಎಂಬ ಪ್ರಶ್ನೆ ನೆಟ್ಟಿಗರದ್ದಾಗಿದೆ.
ಭೀಮನ ಅಮವಾಸ್ಯೆಯಂದು ಪತಿಯ ಆಯಸ್ಸು, ಯಶಸ್ಸಿಗೆ ಪತ್ನಿ ತಪ್ಪದೆ ಮಾಡಿ ಈ ಕೆಲಸ
ಗೋಮಾಂಸ, ಹಂದಿಮಾಂಸ, ಆಲ್ಕೋಹಾಲ್ ಮತ್ತು ಕಡಲೆಕಾಯಿ ಬೆಣ್ಣೆ ಬಳಕೆ ತಪ್ಪಿಸಲು ವೈದ್ಯರ ಸಲಹೆ ಇದೆ. ಮುಂದುವರಿದು ಮೊಸರು, ಸೌತೆಕಾಯಿ ಬಳಸಬಾರದೆಂದು ಟಿಕ್ ಹಾಕಲಾಗಿತ್ತು. ಇಲ್ಲಿಗೆ ಮುಗಿಯುವುದಿಲ್ಲ. ತಣ್ಣಗಾದ ಅನ್ನ, ಆಲೂಗಡ್ಡೆ ಸೇವನೆಗೂ ಅನುಮತಿಸುವುದಿಲ್ಲ. ಮೈಕ್ರೋವೇವ್ ಆಹಾರವನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಆದರೆ ರೆಫ್ರಿಜರೇಟೆಡ್ ಆಹಾರವನ್ನು ಅನುಮತಿಸುತ್ತದೆ.
ಜಾಲತಾಣದಲ್ಲಿ ಈ ಪಟ್ಟಿಯನ್ನು ಹಂಚಿಕೊಂಡ ನಂತರ ಸುಮಾರು 60,000 ಮಂದಿ ವೀಕ್ಷಿಸಿದ್ದಾರೆ, 11,000 ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ಸರಿ, ತಿನ್ನಲು ಏನು ಉಳಿದಿದೆ” ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. “ಕಡಿಮೆ ಎಣ್ಣೆಯಿಂದ ಬೇಯಿಸಿದ ಕಲ್ಲು ಉಪ್ಪಿನೊಂದಿಗೆ ತಣ್ಣೀರು’ ಬಳಸಬುದೇ ಎಂದು ಇನ್ನೊಬ್ಬರು ಕಿಚಾಯಿಸಿದ್ದಾರೆ.