alex Certify ಬೆರಗುಗೊಳಿಸುವ ವಿಡಿಯೋ ಹಂಚಿಕೊಂಡು ಸ್ಥಳದ ಹೆಸರು ಊಹಿಸಲು ಕೇಳಿದ ಸಚಿವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗುಗೊಳಿಸುವ ವಿಡಿಯೋ ಹಂಚಿಕೊಂಡು ಸ್ಥಳದ ಹೆಸರು ಊಹಿಸಲು ಕೇಳಿದ ಸಚಿವ….!

ನಾಗಾಲ್ಯಾಂಡ್​ ಸಚಿವ ಟೆಮ್ಜೆನ್​ ಇಮ್ನಾ ಅಲಾಂಗ್​ ಅವರು ಮೋಡಗಳ ಮೋಡಿ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಸ್ಯ ಪ್ರಜ್ಞೆಯಿಂದ ಸಾಮಾಜಿಕ ಜಾಲತಾಣದಲ್ಲಿ ರಂಜಿಸುವ ನಾಗಾಲ್ಯಾಂಡ್​ ಸಚಿವ ಟೆಮ್ಜೆನ್​ ಇಮ್ನಾ ಅಲಾಂಗ್​ ಇದೀಗ ಬೆರಗುಗೊಳಿಸುವ ವಿಡಿಯೋ ಪೋಸ್ಟ್​ ಮಾಡಿದ್ದು, ಅವರ ಫಾಲೋಯರ್​ಗಳನ್ನು ನಿಬ್ಬೆರಗಾಗಿಸಿದೆ. ಆ ವಿಡಿಯೋ ಪೋಸ್ಟ್​ ಮಾಡಿ, ಆ ಸ್ಥಳದ ಹೆಸರನ್ನು ಊಹಿಸಲು ತಮ್ಮ ಫಾಲೋಯರ್​ಗಳನ್ನು ಕೇಳಿಕೊಂಡಿದ್ದಾರೆ.

ಜುಲೈ 25 ರಂದು ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಕಣಿವೆಯಲ್ಲಿ ಒಂದು ಪುಟ್ಟ ನಗರ ಕಾಣಿಸುತ್ತದೆ. ಸೂರ್ಯನ ಬೆಳಕು ಪೂರ್ಣ ಪ್ರಮಾಣದ ಹೊತ್ತಲ್ಲಿ ಮನೆ ಕಟ್ಟಡಗಳಿಂದ ವಿದ್ಯುತ್​ ದೀಪ ಬೆಳಗುವುದರ ಜತೆಗೆ ಮೋಡಗಳು ತೇಲುತ್ತಾ ಸಾಗುವುದು ವರ್ಣನಾತೀತ ದೃಶ್ಯವಾಗಿದೆ.

ಕಣಿವೆಗಳ ಕೆಳಗೆ ತೇಲುತ್ತಿರುವ ಮೋಡಗಳು, ಸುಂದರವಲ್ಲವೇ? ಸ್ಥಳವನ್ನು ಊಹಿಸಿ. ಈ ಮೋಡಿ ಮಾಡುವ ವಿಡಿಯೊ ಸೆರೆಹಿಡಿದಿದ್ದಕ್ಕಾಗಿ ಪಾಮೊಲೆಂಥಾಂಗ್​ ಟುಬೊಯ್​ಗೆ ಧನ್ಯವಾದಗಳು, ಎಂದು ಸಚಿವ ಅಲಾಂಗ್​ ತಮ್ಮ ಖಾತೆಯಲ್ಲಿ ವಿಡಿಯೋ ಜೊತೆ ಬರೆದುಕೊಂಡಿದ್ದಾರೆ.

ಕಾಮೆಂಟ್​ಗಳ ವಿಭಾಗದಲ್ಲಿ ನೆಟ್ಟಿಗರು ಹಲವಾರು ಊಹೆಗಳನ್ನು ಮಾಡಿದ್ದಾರೆ. ಕೋಹಿಮಾ ಸಾಮಾನ್ಯ ಉತ್ತರವಾಗಿತ್ತು.

https://twitter.com/AlongImna/status/1551493514969886720?ref_src=twsrc%5Etfw%7Ctwcamp%5Etweetembed%7Ctwterm%5E1551493514969886720%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fnagaland-minister-temjen-imna-along-shares-mesmerising-video-of-clouds-floating-down-valley-he-also-has-a-question-1980068-2022-07-26

https://twitter.com/shivanandhip/status/1551549280816873473?ref_src=twsrc%5Etfw%7Ctwcamp%5Etweetembed%7Ctwterm%5E1551549280816873473%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fnagaland-minister-temjen-imna-along-shares-mesmerising-video-of-clouds-floating-down-valley-he-also-has-a-question-1980068-2022-07-26

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...