ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಹೊಸಬಾಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1909 ರಲ್ಲಿ ಸ್ಥಾಪಿತವಾಗಿ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದೆ.
ಆದರೂ ಈ ಶಾಲೆ ಕಳೆದ 15 ವರ್ಷಗಳಿಂದ ಸುಣ್ಣ ಬಣ್ಣ ಇಲ್ಲದೇ ದುಃಸ್ಥಿತಿಗೆ ತಲುಪಿತ್ತು. ಶಾಲೆಯ ಪರಿಸ್ಥಿತಿಯನ್ನು ಎಂ.ವಿ. ಕೃಷ್ಣಪ್ಪನವರ ಗಮನಕ್ಕೆ ತರಲಾಗಿದ್ದು, ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 2 ಲಕ್ಷ ರೂ. ವಿನಿಯೋಗಿಸಿ ಸ್ವಚ್ಛತೆ ಹಾಗೂ ಸುಣ್ಣ ಬಣ್ಣ ಮಾಡಿ ಶಾಲೆಗೆ ಮರುಜೀವ ತುಂಬಿದ್ದಾರೆ.
ಈ ಮೂಲಕ ಶಾಲೆಯ ಶಿಕ್ಷಕರ ಮತ್ತು ಊರಿನ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದು, ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಡಿಡಿ ಪಿಕ್ಷರ್ಸ್ ಪ್ರೈ.ಲಿ. ಬೆಂಗಳೂರು ಇದರ ಅಧ್ಯಕ್ಷ ಎಂ.ವಿ. ಕೃಷ್ಣಪ್ಪ ಅವರ ಸೇವೆಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ತಿಳಿಸಿದೆ.