ರಸ್ತೆಯಲ್ಲಿ ಪೊಲೀಸರ ಕಾರಿನ ಕೆಳಗೆ ಮೊಸಳೆಯೊಂದು ಸಿಕ್ಕಿಕೊಂಡ ಘಟನೆ ನಡೆದಿದೆ.
ಫ್ಲೋರಿಡಾ ಪೊಲೀಸರು ತಮ್ಮ ಕಾರಿನ ಅಡಿಯಲ್ಲಿ ಸಿಲುಕಿರುವ ಮೊಸಳೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಫ್ಲೋರಿಡಾದ ಲೀಸ್ರ್ಬಗ್ ಪೊಲೀಸ್ ಗಸ್ತು ವಾಹನದ ಕೆಳಗೆ ಸಿಕ್ಕಿಹಾಕಿಕೊಂಡ ಮೊಸಳೆ ಸಾಕಷ್ಟು ಕಾಟಕೊಟ್ಟಿತು.
ವೆಲ್, ನಾವು ಇದನ್ನು ಪ್ರತಿದಿನ ನೋಡುವುದಿಲ್ಲ……ವೇಗವಾಗಿ ಬಂದ ಮೊಸಳೆ ನಮ್ಮ ವಾಹನದ ಅಡಿಯಲ್ಲಿ ಸಿಕ್ಕಿಕೊಂಡಿತು. ಅದನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಮತ್ತು ವಾಹನಕ್ಕೆ ಯಾವುದೇ ದೊಡ್ಡ ಹಾನಿ ಆಗಿಲ್ಲ ಎಂದು ಫೋಟೋದೊಂದಿಗೆ ಎರಡು ಸಾಲು ಹಂಚಿಕೊಂಡಿದ್ದಾರೆ.
ಘಟನೆಯ ನಂತರ ಅಲಿಗೇಟರ್ ಅನ್ನು ಎಲ್ಲಿಗೆ ಕೊಂಡೊಯ್ಯಲಾಯಿತು ಎಂಬುದನ್ನು ಖಚಿತಪಡಿಸಿಲ್ಲ. ಈ ಹಿಂದೆ ಫ್ಲೋರಿಡಾದಲ್ಲಿ ಇಂತಹ ಹಲವು ನಿದರ್ಶನ ವರದಿಯಾಗಿವೆ. ಕೆಲವು ವಾರಗಳ ಹಿಂದೆ, ಮೊಸಳೆಯು ಗಾಲ್ಫ್ ಆಟಗಾರನ ಹಿಂದೆ ಕಾಣಿಸಿಕೊಂಡಿತ್ತು. ಮೆಲಿಸ್ಸಾ ಎಂಬ ಮಹಿಳೆ ಆ ಚಿತ್ರ ಹಂಚಿಕೊಂಡಿದ್ದರು.
ಈ ಪೊಲೀಸ್ ವಾಹನದ ಕೆಳಗೆ ಮೊಸಳೆ ಸಿಕ್ಕಿಕೊಂಡ ಫೋಟೋಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ.