ನವದೆಹಲಿ: ಆಕಾಶ್ ಏರ್ ಎಂಬ ಹೊಸ ವಿಮಾನ ಹಾರಾಟ ಆರಂಭವಾಗಲಿದ್ದು, ಆಗಸ್ಟ್ 7ರಂದು ಈ ವಿಮಾನ ತನ್ನ ಮೊದಲ ಸಂಚಾರ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.
ಆಕಾಶ್ ಏರ್ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಮುಂಬೈ- ಅಹಮದಾಬಾದ್ಮಾರ್ಗದಲ್ಲಿ ತನ್ನ ಮೊದಲ ಸೇವೆ ಆರಂಭಿಸುವ ಮೂಲಕ ವಾಣಿಜ್ಯ ಕಾರ್ಯಾಚರಣೆ ಪ್ರಾರಂಭಿಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಎರಡು ಬೋಯಿಂಗ್ 737 ಮ್ಯಾಕ್ಸ್ ವಿಮಾನ ಹಾರಾಟ ಕಾರ್ಯಾಚರಣೆ ನಡೆಸುತ್ತಿದ್ದು, ಆಗಸ್ಟ್ 7ರಿಂದ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಾರಕ್ಕೊಮ್ಮೆ ಕಾರ್ಯನಿರ್ವಹಿಸುವ 28 ವಿಮಾನಗಳು ಹಾಗೂ ಆಗಸ್ಟ್ 13ರಿಂದ ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ 28 ವಿಮಾನಗಳ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ ಎಂದು ಆಕಾಶ್ ಏರ್ ತಿಳಿಸಿದೆ.
ಭಾರತದ ವಾರನ್ ಬಫೆಟ್ ಖ್ಯಾತಿಯ ರಾಕೇಶ್ ಜುಂಜುನ್ ವಾಲಾ ಸಹಕಾರದೊಂದಿಗೆ ಆಕಾಶ್ ಏರ್ ಭಾರತೀಯ ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ ಎಂದು ಆಕಾಶ್ ಏರ್ ಸಹ ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್ ತಿಳಿಸಿದ್ದಾರೆ.