ಭಾರತೀಯ ರಸ್ತೆಗಳನ್ನು ಅಮೆರಿಕದಲ್ಲಿರುವ ರಸ್ತೆಗಳಿಗೆ ಸರಿಸಮನಾಗಿ ಮಾಡಲು ಭಾರತ ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕೇಂದ್ರ ಆಗಿಂದಾಗ್ಗೆ ಹೇಳಿಕೊಳ್ಳುತ್ತಿದೆ. ಹಾಗೆಯೇ ದೇಶದ ವಿವಿಧ ಕಡೆಗಳಲ್ಲಿ ಹೊಸ ಎಕ್ಸ್ಪ್ರೆಸ್ ವೇಗಳು ಉದ್ಘಾಟನೆಯಾಗುತ್ತಿದೆ ಮತ್ತು ರಾಷ್ಟ್ರೀಯ ಹೆದ್ದಾರಿಗಳು ತಕ್ಕಮಟ್ಟಿಗೆ ಅಭಿವೃದ್ಧಿ ಕಾಣುತ್ತಿವೆ. ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅನೇಕ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ.
ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕವನ್ನು ಒದಗಿಸುವ ಕರ್ನಾಟಕದ ಹುನಗುಂದ – ಹೊಸಪೇಟೆ ಎಕ್ಸ್ಪ್ರೆಸ್ವೇಯ ನಾಲ್ಕು/ಆರು ಲೇನಿಂಗ್ ಆಗಿರುವ ಕೆಲಸದ ಫೋಟೋ ಹಂಚಿಕೊಂಡಿದ್ದಾರೆ. ಸರಣಿ ಟ್ವೀಟ್ಗಳಲ್ಲಿ ಯೋಜನೆಯನ್ನು ವಿವರವಾಗಿ ತಿಳಿಸಿದ್ದಾರೆ.
ಮೂಲಸೌಕರ್ಯ ಅದ್ಭುತ, ಇದುವೇ ನವಭಾರತ ! ಕರ್ನಾಟಕದ ಹುನಗುಂದ – ಹೆೊಸಪೇಟೆಯ ನಾಲ್ಕು/ಆರು ಲೇನಿಂಗ್ ಯೋಜನೆಯ ಕೆಲಸ ನಡೆದಿದೆ. ಇದು ಕೇರಳ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕವನ್ನು ಒದಗಿಸುತ್ತದೆ ಎಂದು ಅವರ ಟ್ವೀಟ್ ಮಾಡಿದ್ದಾರೆ.
ಸಾಕು ನಾಯಿಯ ಜನ್ಮ ದಿನವನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ ಹಾಸ್ಯ ನಟ..!
97 ಕಿಮೀ ಉದ್ದದ ಈ ಸ್ಟ್ರೆಚ್ ಅನ್ನು 946 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು 687 ಮೀಟರ್ ಉದ್ದದ ಸುರಂಗವನ್ನು ಹೊಸಪೇಟೆಯ ಬಳಿ ಹೊಂದಿದೆ ಮತ್ತು ತುಂಗಭದ್ರಾ ನದಿಯ ಪ್ರಮುಖ ಸೇತುವೆಗಳನ್ನು ಒಳಗೊಂಡಿದೆ.
ಮತ್ತೊಂದು ಟ್ವೀಟ್ನಲ್ಲಿ, ಹೆದ್ದಾರಿಯು ದರೋಜಿ ಕರಡಿ ಧಾಮಕ್ಕೆ ಸಂಪರ್ಕವನ್ನು ಒದಗಿಸುವುದರಿಂದ ಈ ವಿಸ್ತರಣೆಯು ಎಲ್ಲಾ ಪ್ರಕೃತಿ ಮತ್ತು ವನ್ಯಜಿವಿ ಪ್ರಿಯರಿಗೆ ಸ್ವರ್ಗವಾಗಿದೆ ಎಂದು ಅವರು ಎಕ್ಸ್ಪ್ರೆಸ್ವೇ ಮಹತ್ವ ತಿಳಿಸಿದ್ದಾರೆ.
ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಕೋನದಿಂದ ಈ ವಿಸ್ತರಣೆಯು ಮಹತ್ವದ್ದಾಗಿದೆ. ಏಕೆಂದರೆ ಈ ರಸ್ತೆ ವಿಸ್ತರಣೆಯು ಭಗವಾನ್ ಹನುಮಾನ್, ಅಂಜನಿ ಪರ್ವತ ಮತ್ತು ಹಂಪಿಯಲ್ಲಿರುವ ಕಿಷ್ಕಿಂಧೆಯ ಜನ್ಮಸ್ಥಳಕ್ಕೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ ಎಂದಿದ್ದಾರೆ.
ಹುನಗುಂದ- ಹೊಸಪೇಟೆ ಎಕ್ಸ್ಪ್ರೆಸ್ವೇಯು ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಪ್ರಯಾಣಿಕರಿಗೆ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಜೋಡಣೆಯು ಕರ್ನಾಟಕದ ಹುನಗುಂದ, ಇಳಕಲ್, ಕುಷ್ಟಗಿ, ಹಿಟ್ನಾಳ್, ಹುಲಗಿ ಮತ್ತು ಹೊಸಪೇಟೆ ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಕರ್ನಾಟಕದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-13ರ 99 ಕಿಮೀ ಇಲ್ಲಿ ಸಾಗುತ್ತದೆ.