ಫುಡ್ ಡೆಲಿವರಿ ಆಪ್ಗಳು ನಮ್ಮ ಕೆಲಸವನ್ನು ತುಂಬಾನೆ ಸುಲಭವಾಗಿಸಿವೆ. ಆದರೆ ಕೆಲವೊಮ್ಮೆ ಈ ಫುಡ್ ಡೆಲಿವರಿ ಆ್ಯಪ್ಗಳು ನಮಗೆ ತೊಂದರೆಯನ್ನೂ ಕೊಡಬಹುದು. ಈ ಮಾತಿಗೆ ಸಾಕ್ಷಿ ಎಂಬಂತ ಘಟನೆಯೊಂದು ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. ಜಿವಾಜಿ ಕ್ಲಬ್ ಎಂಬ ಹೆಸರಿನ ರೆಸ್ಟೋರೆಂಟ್ ಮಟರ್ ಪನ್ನೀರ್ ಆರ್ಡರ್ ಮಾಡಿದ್ದ ಸಸ್ಯಾಹಾರಿ ಕುಟುಂಬಕ್ಕೆ ಚಿಕನ್ ಕರ್ರಿ ವಿತರಿಸಿದ್ದು ಇದಕ್ಕಾಗಿ 20 ಸಾವಿರ ರೂಪಾಯಿ ದಂಡ ತೆತ್ತಿದೆ.
ಜಿವಾಜಿ ಕ್ಲಬ್ನ ಸದಸ್ಯರೂ ಆಗಿರುವ ವಕೀಲ ಸಿದ್ಧಾರ್ಥ ಶ್ರೀವಾತ್ಸವ ಡೆಲಿವರಿ ಅಪ್ಲಿಕೇಶನ್ ಮೂಲಕ ಮಟರ್ ಪನ್ನೀರ್ ಆರ್ಡರ್ ಮಾಡಿದ್ದರು. ಆದರೆ ಆರ್ಡರ್ ರೂಪದಲ್ಲಿ ಬಂದಿದ್ದ ಚಿಕನ್ ಕರ್ರಿ ಕಂಡು ಶುದ್ಧ ಸಸ್ಯಾಹಾರಿ ಕುಟುಂಬ ಆಘಾತಗೊಂಡಿತ್ತು. ಇದಾದ ಬಳಿಕ ಗ್ರಾಹಕರ ರಕ್ಷಣಾ ವೇದಿಕೆಯ ಕದ ತಟ್ಟಿದ್ದ ಸಿದ್ಧಾರ್ಥ್ ಶ್ರೀವಾತ್ಸವ್ ಪರಿಹಾರ ರೂಪದಲ್ಲಿ 20 ಸಾವಿರ ರೂಪಾಯಿ ಪಡೆದಿದ್ದಾರೆ.
ಈ ಘಟನೆಯಿಂದ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಹಾನಿಯಾಗಿದೆ ಎಂದು ವೇದಿಕೆ ಗಮನಿಸಿದ ಗ್ರಾಹಕ ರಕ್ಷಣಾ ವೇದಿಕೆಯು ಜಿವಾಜಿ ಕ್ಲಬ್ಗೆ 20 ಸಾವಿರ ರೂಪಾಯಿ ದಂಡ ವಿಧಿಸಿದೆ. ಹಾಗೂ ಕಾನೂನು ಹೋರಾಟದ ಸಂದರ್ಭದಲ್ಲಿ ದೂರುದಾರ ಮಾಡಿರುವ ಖರ್ಚಿನ ಸಂಪೂರ್ಣ ಜವಾಬ್ದಾರಿಯನ್ನೂ ರೆಸ್ಟೋರೆಂಟ್ ಹೊರತಕ್ಕದ್ದು ಎಂದು ಹೇಳಿದೆ.