ಕೋತಿಗಳ ಹಿಂಡೊಂದು ನಾಲ್ಕು ತಿಂಗಳ ಪುಟ್ಟ ಕಂದನನ್ನು ಮೂರಂತಸ್ತಿನ ಕಟ್ಟಡದಿಂದ ಕೆಳಗೆಸೆದಿದ್ದು, ಇದರ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.
ಘಟನೆಯ ವಿವರ: ಬರೇಲಿಯ ದುಂಕ ಗ್ರಾಮದ ನಿರ್ದೇಶ್ ಉಪಾಧ್ಯಾಯ ಎಂಬವರು ತಮ್ಮ ಪತ್ನಿ ಹಾಗೂ ನಾಲ್ಕು ತಿಂಗಳ ಮಗನೊಂದಿಗೆ ಮಹಡಿ ಮೇಲೆ ವಾಕ್ ಮಾಡುತ್ತಿದ್ದರು. ಈ ವೇಳೆ ಕೋತಿಗಳ ದೊಡ್ಡ ಗುಂಪು ಅವರುಗಳನ್ನು ಸುತ್ತುವರೆದಿದೆ.
ಇದರಿಂದ ಗಾಬರಿಗೊಂಡ ದಂಪತಿ ಮೆಟ್ಟಿಲುಗಳತ್ತ ಧಾವಿಸುವ ವೇಳೆ ಮಗು ಕೈತಪ್ಪಿ ಕೆಳಗೆ ಬಿದ್ದಿದೆ. ಆ ಸಂದರ್ಭ ಏಕಾಏಕಿ ಬಂದ ಕೋತಿಗಳು ಮಗುವನ್ನು ಎತ್ತಿಕೊಂಡು ಕೆಳಗೆಸೆದಿವೆ. ಇದರ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.