ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಲುಲೂ ಮಾಲ್ನಲ್ಲಿ ಕೆಲವು ಜನರು ನಮಾಜ್ ಮಾಡುವ ವೀಡಿಯೊ ಹಿದಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಮಾಲ್ನ ಶಾಪಿಂಗ್ ಅಖಾಡದಲ್ಲಿ ಜನರ ಗುಂಪೊಂದು ತೆರೆದ ಜಾಗದಲ್ಲಿ ನಮಾಜ್ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಾದ ನಂತರ ಅಖಿಲ ಭಾರತೀಯ ಹಿಂದೂ ಮಹಾಸಭಾ ಎಚ್ಚರಿಕೆ ನೀಡಿದ್ದು, ಮಾಲ್ನಲ್ಲಿ ಮತ್ತೊಮ್ಮೆ ನಮಾಜ್ ಮಾಡಿದರೆ ನಾವು ಸುಂದರಕಾಂಡ ಪಠಿಸುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಘಟನೆಯು ಹಿಂದೂ ಸಮುದಾಯದವರಿಗೂ ಮಾಲ್ ಬಹಿಷ್ಕರಿಸಲು ಸಹ ಕೋರಿದೆ. ಮಾಲ್ ಆರಂಭವಾದಾಗಿನಿಂದಲೂ ಅಲ್ಲಿ ಲವ್ ಜಿಹಾದ್ ಪ್ರಚಾರ ನಡೆದಿದೆ ಎಂದು ಹೇಳಲಾಗುತ್ತಿದೆ ಎಂದು ಹಿಂದೂ ಸಂಘಟನೆಯು ಹೇಳಿಕೆಯಲ್ಲಿ ತಿಳಿಸಿದೆ.
ಮಾಲ್ನಲ್ಲಿ ನೇಮಕಗೊಂಡಿರುವ ಉದ್ಯೋಗಿಗಳಲ್ಲಿ 80 ಪ್ರತಿಶತದಷ್ಟು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಮತ್ತು ಉಳಿದ 20 ಪ್ರತಿಶತದಷ್ಟು ಹಿಂದೂ ಹುಡುಗಿಯರ ಲವ್ ಜಿಹಾದ್ ಪ್ರಾರಂಭಿಸಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಅಥವಾ ಇತರ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರ ಹೊರತಾಗಿಯೂ ಕೆಲವರು ಲುಲೂ ಮಾಲ್ನಲ್ಲಿ ನಮಾಜ್ ಮಾಡಿದರು, ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಟನೆ ಒತ್ತಾಯಿಸಿದೆ.
ಜುಲೈ 10ರಂದು ರಾಜಧಾನಿಯಲ್ಲಿ ಲುಲೂ ಮಾಲ್ ಅನ್ನು ಯುಪಿ ಸಿಎಂ ಆದಿತ್ಯನಾಥ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಲುಲೂ ಗ್ರೂಪ್ ಅಧ್ಯಕ್ಷ ಯೂಸುಫಲಿ ಎಂಎ ಅವರು ಉಪಸ್ಥಿತರಿದ್ದರು.