ಜಗತ್ತಿಗೆ ಕೋವಿಡ್ ಕಾಲಿಟ್ಟ ನಂತರ ಮನೆಯಿಂದಲೇ ಕೆಲಸ ಮಾಡುವುದು ಹೆಚ್ಚಾಯಿತು. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು ಈ ವರ್ಕ್ ಫ್ರಂ ಹೋಮ್ ಕಾನ್ಸೆಪ್ಟ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಅದೇನೆಂದ್ರು ಕೇಳಿದ್ರೆ ಮಾತ್ರ ನೀವು ಅಚ್ಚರಿಗೊಳಗಾಗ್ತೀರಾ.
ಹೌದು, ವ್ಯಕ್ತಿಯೊಬ್ಬರು ರಾತ್ರಿ ವೇಳೆ ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಸವಾರಿ ಮಾಡುವಾಗ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿದ್ದಾರೆ. ಈ ಫೋಟೋವನ್ನು ಲಿಂಕ್ಡ್‌ಇನ್ ಬಳಕೆದಾರ ಹರ್ಷಪ್ರೀತ್ ಸಿಂಗ್ ಅವರು ಹಂಚಿಕೊಂಡಿದ್ದಾರೆ. ರಾತ್ರಿ 11:00 ಗಂಟೆಗೆ ನಗರದ ಅತ್ಯಂತ ಜನನಿಬಿಡ ಫ್ಲೈಓವರ್‌ನಲ್ಲಿ ವ್ಯಕ್ತಿಯೊಬ್ಬರು ಹಿಂಬದಿ ಸವಾರಿ ಮಾಡುತ್ತಾ ತನ್ನ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ರು.
ಸಿಲಿಕಾನ್ ಸಿಟಿ ಬೆಂಗಳೂರು ನಗರದ ಅತ್ಯಂತ ಜನನಿಬಿಡ ಫ್ಲೈಓವರ್ ಒಂದರಲ್ಲಿ ರಾತ್ರಿ 11 ಗಂಟೆಗೆ ದ್ವಿಚಕ್ರವಾಹನದ ಹಿಂಬದಿ ಸವಾರ ತನ್ನ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಂಗಳೂರು ಅತ್ಯುತ್ತಮವಾಗಿದೆಯೇ ಅಥವಾ ಕೆಟ್ಟ ಅನುಭವವಾಗಿದೇಯೆ ಅಂತಾ ಅಭಿಷೇಕ್ ವಿಜಯವರ್ಗಿಯಾ ಎಂಬವರು ಲಿಂಕ್ಡ್‌ಇನ್‌ನಲ್ಲಿ ಚಿತ್ರವನ್ನು ಮರುಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಹಲವಾರು ಲೈಕ್ಸ್ ಹಾಗೂ ಟನ್ ಗಳಷ್ಟು ಪ್ರತಿಕ್ರಿಯೆಗಳು ಬಂದಿವೆ.
ಟೆಕ್ಕಿಗಳ ಕೆಲಸದ ಒತ್ತಡದ ಬಗ್ಗೆ ಹೆಚ್ಚಿನ ಜನರು ಚರ್ಚಿಸಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ಬಳಕೆದಾರರೊಬ್ಬರು, ಪ್ರತಿಯೊಬ್ಬ ಬೆಂಗಳೂರಿನ ವ್ಯಕ್ತಿ ಸಾಫ್ಟ್‌ವೇರ್ ಡೆವಲಪರ್ ಅಲ್ಲ. ಆ ವ್ಯಕ್ತಿ ತನ್ನ ಸ್ನೇಹಿತ. ಆತನ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ತನ್ನ ಲ್ಯಾಪ್ ಟಾಪ್ ನಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡುತ್ತಿದ್ದ ಎಂದು ಪ್ರತಿಕ್ರಿಯಿಸಿದ್ದಾರೆ.