ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ಸ್ಗಳನ್ನು ಪಡೆಯಬೇಕು ಎಂಬ ಹುಚ್ಚು, ಜೀವದ ಜೊತೆ ಚೆಲ್ಲಾಟವಾಡುವಂತೆಯೂ ಮಾಡಿ ಬಿಡುತ್ತದೆ. ತಮ್ಮ ಮೋಜು ಮಸ್ತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹೋಗಿ ಎಷ್ಟೋ ಜನರು ಸಾವನ್ನಪ್ಪಿದ ಉದಾಹರಣೆ ಕೂಡ ಇದೆ. ಇಂತದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಹರಿದಾಡುತ್ತಿದೆ.
ಟ್ವಿಟರ್ನಲ್ಲಿ ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಶೇರ್ ಮಾಡಿರುವ ವಿಡಿಯೋದಲ್ಲಿ ಅಲೆಯು ಭಯಾನಕವಾಗಿ ತೀರಕ್ಕೆ ಬಂದು ಅಪ್ಪಳಿಸುತ್ತಿದ್ದರೂ ಸಹ ಕೆಲವೊಂದಿಷ್ಟು ಜನರು ಅಪಾಯಕಾರಿ ಅಲೆಗಳ ಬಳಿಯೇ ನಿಂತಿರುವುದನ್ನು ಕಾಣಬಹುದಾಗಿದೆ, ಹಲವರು ಈ ಭಯಾನಕ ಅಲೆಗಳ ಜೊತೆ ಸೆಲ್ಫಿ ತೆಗೆದುಕೊಳ್ತಿದ್ದರೆ ಇನ್ನೂ ಕೆಲವರು ವಿಡಿಯೋ ಮಾಡ್ತಿದ್ದಾರೆ, ಈ ಘಟನೆಯು ಎಲ್ಲಿ ನಡೆದಿದೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ.
ಈ ವಿಡಿಯೋ ಶೇರ್ ಮಾಡಿರುವ ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಸೋಶಿಯಲ್ ಮೀಡಿಯಾದ ಲೈಕ್ಗಳಿಗಿಂತ ನಿಮ್ಮ ಜೀವ ಹೆಚ್ಚು ಮುಖ್ಯ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ 28 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ, ಪ್ರವಾಸಿಗರ ವರ್ತನೆಗೆ ನೆಟ್ಟಿಗರು ಕೂಡ ಆಕ್ರೋಶ ಹೊರ ಹಾಕಿದ್ದಾರೆ.