alex Certify ಯುಕೆಯಿಂದ ದಾರಿ ತಪ್ಪಿಸಿಕೊಂಡು ಯುಎಸ್​ ತಲುಪಿದ ಪಾರಿವಾಳ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಕೆಯಿಂದ ದಾರಿ ತಪ್ಪಿಸಿಕೊಂಡು ಯುಎಸ್​ ತಲುಪಿದ ಪಾರಿವಾಳ…..!

ಒಂದು ಮನೆಯ ಪಾರಿವಾಳವು ರಾಂಗ್​ ರೂಟ್​ ಹಿಡಿದ ಕಾರಣ ವಿಳಾಸ ತಪ್ಪಿ ಸರಿಸುಮಾರು 4 ಸಾವಿರ ಮೈಲುಗಳ ದೂರಕ್ಕೆ ಪ್ರಯಾಣ ಬೆಳೆಸಿತು. ಅಚ್ಚರಿ ಎಂದರೆ ಯುಕೆಯಿಂದ ಹೊರಟ ಪಾರಿವಾಳ ತಲುಪಿದ್ದು ಯುಎಸ್​ನಲ್ಲಿ!

ಬಾಬ್​ ರೇಸಿಂಗ್​ ಪಾರಿವಾಳ ಸುಮಾರು ಮೂರು ವಾರಗಳ ಹಿಂದೆ ಗುರ್ನಸಿಯಿಂದ ಚಾನೆಲ್​ ದ್ವೀಪದತ್ತ ಹೊರಟಿತು, ನಂತರ ಇಂಗ್ಲೆಂಡ್​ನ ನಾರ್ತ್​ ಈಸ್ಟ್​ನಲ್ಲಿರುವ ಮನೆಗೆ ಹಿಂತಿರುಗಬೇಕಿತ್ತು. ಈ ಪ್ರಯಾಣವು ಸುಮಾರು 10 ಗಂಟೆಗಳ ಕಾಲ ಸಾಕಾಗಿತ್ತು. ಆದರೆ, ಪಾರಿವಾಳ ನಾಪತ್ತೆಯಾಯಿತು. ಕೊನೆಗೆ ಅಲಬಾಮಾದ ಮನ್ರೋ ಕೌಂಟಿಯ ಮೆಕ್ಸಿಯಾದಲ್ಲಿನ ತನ್ನ ತೋಟದಲ್ಲಿ ವೃದ್ಧ ವ್ಯಕ್ತಿಯು ಪಾರಿವಾಳವನ್ನು ಕಂಡುಕೊಂಡ ನಂತರ ಈ ರಹಸ್ಯ ಬಯಲಾಯಿತು.

ಆತ ಪಾರಿವಾಳದ ಲೆಗ್​ ಬ್ಯಾಂಡ್​ ತೆಗೆದಾಗ ಇದು ಸಮುದ್ರದಾಚೆಗಿನ ಇಂಗ್ಲೆಂಡ್​ನದ್ದು ಎಂದು ಬಹಿರಂಗವಾಯಿತು. ಬಳಿಕ ಅದನ್ನು ಪಶುವೈದ್ಯರಿಂದ ವೈದ್ಯಕಿಯ ತಪಾಸಣೆಗೆ ಒಳಪಡಿಸಲಾಯಿತು. ಪಾರಿವಾಳವನ್ನು ಸದ್ಯ ಕಾಳಜಿಯಿಂದ ಆರೈಕೆ ಮಾಡಲಾಗುತ್ತಿದೆ.

ವೆಬ್​ಕ್ಯಾಮ್​ ಮೂಲಕ ಪಾರಿವಾಳವು ತನ್ನ ಮಾಲೀಕರೊಂದಿಗೆ ಮತ್ತೆ ಸೇರಿಕೊಂಡಿದೆ. ಪಾರಿವಾಳ ಮಾಲಿಕ ಅಲನ್​ ತನ್ನ ಪಾರಿವಾಳವನ್ನು ಮರಳಿ ತರಲು ​ ಅಮೇರಿಕಾಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದಾನೆ ಎಂದು ವರದಿಯಾಗಿದೆ.

ಅಲನ್​ ತನ್ನ ಪಾರಿವಾಳವು ರಾಂಗ್​ ಟರ್ನ್ ಪಡೆದುಕೊಂಡಿತು, ಅದು ಹಡಗಿನಲ್ಲಿ ಇಳಿದಿರಬೇಕು ಎಂದು ಭಾವಿಸಿದ್ದಾನೆ. ಹೀಗಾಗಿ ಹಡಗಿನೊಂದಿಗೆ ಅದು ಅಟ್ಲಾಂಟಿಕ್​ ಅನ್ನು ದಾಟಿದೆ ಎಂದು ಅಭಿಪ್ರಾಯಪಟ್ಟಿದ್ದಾನೆ. ಹಾಗೆಯೇ ಸಂಪರ್ಕಕ್ಕೆ ಸಿಕ್ಕಿರುವುದಕ್ಕೆ ಸಮಾಧಾನಪಟ್ಟಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...