ಮಹಾನಗರ ಪ್ರದೇಶದಲ್ಲಿ ಫುಡ್ ಡೆಲಿವರಿ ಆ್ಯಪ್ ಬಳಕೆ ಹೆಚ್ಚಾಗುತ್ತಲೇ ಇದೆ. ಹತ್ತಾರು ಆ್ಯಪ್ಗಳಿದ್ದು, ಒಂದಲ್ಲಾ ಒಂದು ಆಫರ್ಗಳನ್ನು ನೀಡುತ್ತಿರುತ್ತವೆ. ಆಫರ್ಗಳನ್ನು ಹುಡುಕುವ ಗ್ರಾಹಕರೂ ಹೆಚ್ಚಿದ್ದಾರೆ. ಆದರೆ ಇಲ್ಲೊಂದು ಪ್ರಸಂಗದಲ್ಲಿ ಫುಡ್ ಡೆಲಿವರಿ ಆ್ಯಪ್ನಲ್ಲಿ ಸಾವಿರಾರು ಮಂದಿ ಗ್ರಾಹಕರು ಉಚಿತ ಆಫರ್ ಪಡೆದಿದ್ದಾರೆ. ಅದು ಹೇಗೆಂದು ಯೋಚಿಸುತ್ತಿದ್ದೀರಾ, ಈ ಸ್ವಾರಸ್ಯಕರ ಸುದ್ದಿ ಓದಿ.
ಯುಎಸ್ನಲ್ಲಿ ಡೋರ್ ಡ್ಯಾಶ್ ಎಂಬ ಫುಡ್ ಡೆಲಿವರಿ ಆ್ಯಪ್ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ನೂರಾರು ಜನರು ಒಂದು ಪೈಸೆ ಪಾವತಿಸದೆ ಆರ್ಡರ್ ಮಾಡಲು ಕಾರಣವಾಯಿತು.
ಡೋರ್ಡ್ಯಾಶ್ ಸಮಸ್ಯೆ ವಿಚಾರ ಟ್ವಿಟ್ಟರ್ನಲ್ಲಿ ವೈರಲ್ ಆಗಿದ್ದು, ಹೆಚ್ಚು ಜನರ ಗಮನ ಸೆಳೆಯಿತು. ಗ್ರಾಹಕರು ಉಚಿತ ಆಹಾರವನ್ನು ಆರ್ಡರ್ ಮಾಡುವ ಮೂಲಕ ಅವಕಾಶವನ್ನು ಎನ್ಕ್ಯಾಶ್ ಮಾಡಿಕೊಂಡರು. ಹೆಚ್ಚಿನ ಬೆಲೆಯ ಟಕಿಲಾ ಮತ್ತು ಗರ್ಭನಿರೋಧಕಗಳನ್ನು ಸಹ ಆರ್ಡರ್ ಮಾಡಿದ್ದರು. ಡೋರ್ಡ್ಯಾಶ್ ಸಮಸ್ಯೆಯನ್ನು ಪರಿಹರಿಸುವ ಹೊತ್ತಿಗೆ ಪರಿಸ್ಥಿತಿ ಕೈಮೀರಿತ್ತು. ಸಾವಿರಾರು ಡಾಲರ್ಗಳ ಮೊತ್ತದ ಆರ್ಡರ್ಗಳ ಸ್ಕ್ರೀನ್ಶಾಟ್ಗಳನ್ನು ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ.
ಡೋರ್ಡ್ಯಾಶ್ ವಕ್ತಾರರು ಹೇಳುವ ಪ್ರಕಾರ, ದೋಷಪೂರಿತ ಆರ್ಡರ್ಗಳನ್ನು ರದ್ದುಗೊಳಿಸುತ್ತಿದ್ದು, ವ್ಯಾಪಾರಿಗಳ ಜೊತೆ ಸಂಪರ್ಕದಲ್ಲಿದ್ದು, ನಷ್ಟ ಪರಿಹಾರಕ್ಕೆ ಪ್ರಯತ್ನ ಮಾಡಲಾಗಿದೆ.