ಬಾರ್ಬಿಡಾಲ್……ಮುದ್ದಾದ ಗೊಂಬೆಯ ಹೆಸರು. ಎಷ್ಟೋ ಹುಡುಗರಿಗೆ ತನ್ನ ಹುಡುಗಿ ಇದ್ದರೆ ಬಾರ್ಬಿಡಾಲ್ ತರಹ ಇರಬೇಕು ಅನ್ನೋ ಕನಸು ಇರುತ್ತೆ. ಹೊಂಬಣ್ಣದ ಕೂದಲು, ನುಣುಪಾದ ಚರ್ಮದ ಗೊಂಬೆಯನ್ನ ಮಿನಿ, ಮಿಡಿ, ಸ್ಕರ್ಟ್ಗಳಲ್ಲಿ ನೋಡಿದ್ದೇ ಹೆಚ್ಚು. ಆದ್ರೆ ಈಗ ಇದೇ ಬಾರ್ಬಿಡಾಲ್ನ ಸ್ಟೈಲ್ ಚೇಂಜ್ ಆಗ್ತಿದೆ. ಬಾರ್ಬಿಡಾಲ್ ಈಗ ಇಂಡಿಯನ್ ಸ್ಟೈಲ್ನಲ್ಲಿ ಕಾಣಿಸಿಕೊಳ್ಳಲಿದೆ.
ಕಣ್ಣಲ್ಲಿ ಕಾಡಿಗೆ, ಕಿವಿಯಲ್ಲಿ ಝೂಮ್ಕಾ, ಕೈಯಲ್ಲಿ ಬಳೆ, ಕೆಂಪು ಬಣ್ಣದ ಸೂಟ್ ಇದು ಬಾರ್ಬಿಡಾಲ್ನ ಹೊಸ ರೂಪ. ಬಾರ್ಬಿಗೆ ಈ ರೀತಿ ಭಾರತೀಯಳಂತೆ ಕಾಣಿಸುವಂತೆ ಮಾಡಿದ್ದು ಯೂಟ್ಯೂಬರ್ ಹಾಗೂ ಬ್ಯೂಟಿಬ್ರಾಂಡ್ನ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ ದೀಪಿಕಾ ಮುತ್ಯಾಲ. ಇವರೇ ಈಗ ಬಾರ್ಬಿಡಾಲ್ಗೆ ಹೊಸ ರೂಪ ಕೊಟ್ಟಿದ್ದಾರೆ. ಬಾರ್ಬಿಯ ಈ ಹೊಸ ರೂಪಕ್ಕೆ ಇಂಡಿಯನ್ ಜನರು ಫಿದಾ ಆಗಿದ್ದಾರೆ. ಕೆಲವರು ಬಾರ್ಬಿಯ ಈ ಹೊಸ ರೂಪ-ವೇಷ ನೋಡಿ ಇದು ನೋಡಲು ನಟಿ ಪ್ರಿಯಾಂಕಾ ಚೋಪ್ರಾಳಂತೆ ಕಾಣಿಸುತ್ತೆ ಅಂತ ಹೇಳುತ್ತಿದ್ದಾರೆ.
ಜೂನ್ ನಲ್ಲಿ ಭಾರತದ ಇಂಧನ ಬಳಕೆ ಶೇ.18ರಷ್ಟು ಜಿಗಿತ, ಕಾರಣವೇನು ಗೊತ್ತಾ ?
ಬಾರ್ಬಿ ತಯಾರಿಸುವ ಕಂಪನಿ, ಮ್ಯಾಟೆಲ್ ಸಹಯೋಗದಿಂದ ದೀಪಿಕಾ ಮುತ್ಯಾಲ ಬ್ರೌನ್ಸ್ಕಿನ್ ಮೇಕಪ್ನ್ನ ಜನಪ್ರಿಯಗೊಳಿಸಲು ಈ ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಬಾರ್ಬಿಯ ಹೊಸ ರೂಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ. ಮುಂದೆ ಇದೇ ರೀತಿಯ ಇನ್ನೂ ಭಾರತೀಯ ಭಿನ್ನಭಿನ್ನ ರೂಪಗಳಲ್ಲಿ ಬಾರ್ಬಿ ಡಾಲ್ಗಳನ್ನ ನೋಡಬಹುದಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಬಾರ್ಬಿಯ ಬದಲಾದ ರೂಪ ವೈರಲ್ ಆಗಿದೆ. ಈ ಫೋಟೋ ಕ್ಯಾಪ್ಷನ್ನಲ್ಲಿ “ ಇವಳೇ ನೋಡಿ 2022ರ ಫೇಮಸ್ ಬಾರ್ಬಿಡಾಲ್. ರಂಗು ರಂಗಾಗಿರುವ ಈಕೆಯ ತ್ವಚೆ, ದೊಡ್ಡ ದೊಡ್ಡ ಕಣ್ಣುಗಳು ಮತ್ತು ಕಾಮನಬಿಲ್ಲಿನ ಆಕಾರದ ಹುಬ್ಬುಗಳು ನೋಡಲು ಬಲು ಮನಮೋಹಕ. ಈಕೆ ಭಾರತೀಯ ಹೆಣ್ಣುಮಕ್ಕಳು ತೊಡುವ ಬಳೆ ಮತ್ತು ಕಿವಿಯೋಲೆಯಂತೆ ಈಕೆಯೂ ಅಷ್ಟೇ ಗರ್ವ ಮತ್ತು ಖುಷಿಯಿಂದ ತೊಡುತ್ತಾಳೆ. ಇಡೀ ಜಗತ್ತನ್ನೇ ಆಳುವುದಕ್ಕೆ ಈಗ ಈಕೆ ಸಿದ್ಧವಾಗಿದ್ದಾಳೆ.“ ಅಂತ ದೀಪಿಕಾ ಬರೆದುಕೊಂಡಿದ್ದಾರೆ.
ಅಮೆರಿಕಾ ಕಂಪನಿ ಜೊತೆ ಸೇರಿ ದೀಪಿಕಾ ಅವರು ಬಾರ್ಬಿಗೆ ಈ ಹೊಸ ರೂಪವನ್ನ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. “ಈ ಬಾರ್ಬಿಡಾಲ್ ಸಾಂಸ್ಕೃತಿಕ ಅಡೆತಡೆಗಳನ್ನ ಮೀರಿ ಬೆಳೆದವಳು. ಉತ್ತಮ ಗುರಿ, ಸಹನಾಭೂತಿ ಮತ್ತುಕರುಣೆಯನ್ನ ಈಕೆಗೆ ಜನ್ಮತಃ ಬಂದಿರೋದು. ಪ್ರಪಂಚದಲ್ಲಿ ತನ್ನದೇ ಛಾಪನ್ನ ಮೂಡಿಸುವುದಕ್ಕಾಗಿ ಆಕೆಗೆ ಹಿಂದುಮುಂದು ನೋಡುವುದಿಲ್ಲ. ಈಕೆ ಈ ಕಾಲದ ಸ್ವತಂತ್ರ ಮನೋಭಾವದ ಹೆಣ್ಣುಮಕ್ಕಳ ಪ್ರತೀಕ” ಅಂತ ದೀಪಿಕಾ ಅವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
ಹೊಸ ರೂಪದ ಬಾರ್ಬಿ ಈಗ ಫುಲ್ ಫೇಮಸ್. ಅದರಲ್ಲೂ ಭಾರತೀಯರು ಈ ಹೊಸರೂಪದ ಬಾರ್ಬಿಡಾಲ್ ಮಾರುಕಟ್ಟೆಗೆ ಬರುವುದನ್ನ ಕಾಯ್ತಾ ಇದ್ದಾರೆ. ಒಬ್ಬರಂತೂ ಈ ಬಾರ್ಬಿ ನೋಡಲು ನನ್ನಂತೆಯೇ ಇದೆ ಅಂತ ಹೇಳಿಕೊಂಡಿದ್ದಾರೆ. ಹೀಗೆ ಇನ್ನೂ ಅನೇಕ ಬಗೆಯ ಕಾಮೆಂಟ್ಗಳನ್ನ ಇಲ್ಲಿ ನೋಡಲು ಸಿಗುತ್ತಿದೆ.