ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿ ಜೂನಿಯರ್ ಆಪರೇಟರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಅಧಿಕೃತ ಸೈಟ್ iocl.com ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನಾಂಕವಾಗಿದೆ.
ಈ ನೇಮಕಾತಿ ಡ್ರೈವ್ ಮೂಲಕ ಸಂಸ್ಥೆಯಲ್ಲಿ ಒಟ್ಟು 39 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹತೆಗಳು, ಅನುಭವ, ಆಯ್ಕೆ ಮಾನದಂಡಗಳು ಮತ್ತು ಇತರ ವಿವರಗಳ ಬಗ್ಗೆ ಹೇಳುವುದಾದರೆ, ಆನ್ಲೈನ್ ಅರ್ಜಿ ಸ್ವೀಕೃತಿಗಾಗಿ ಪೋರ್ಟಲ್ ತೆರೆಯುವ ದಿನಾಂಕ ಜುಲೈ 09, 2022, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 29.
ಲಿಖಿತ ಪರೀಕ್ಷೆಗೆ ತಾತ್ಕಾಲಿಕ ದಿನಾಂಕ ಆಗಸ್ಟ್ 21, ಲಿಖಿತ ಪರೀಕ್ಷೆಯ ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳ ಫಲಿತಾಂಶವನ್ನು ಅಪ್ಲೋಡ್ ಮಾಡುವ ತಾತ್ಕಾಲಿಕ ದಿನಾಂಕ ಸೆಪ್ಟೆಂಬರ್ 06.
ದಾಖಲೆಗಳು ಮತ್ತು ಚಾಲನಾ ಪರೀಕ್ಷೆ ಪರಿಶೀಲನೆ ಸೆ.20ರಿಂದ 24ರವರೆಗೆ ನಡೆಯುವುದು. ಅಂತಿಮ ಫಲಿತಾಂಶವನ್ನು ಅಕ್ಟೋಬರ್ 14ರಂದು ಅಪ್ಲೋಡ್ ಮಾಡಲಾಗುತ್ತದೆ.
ಶಿಕ್ಷಣ ಅರ್ಹತೆ: ಸಾಮಾನ್ಯ ಇಡಬ್ಲ್ಯುಎಸ್ ಮತ್ತು ಒಬಿಸಿ ವರ್ಗಕ್ಕೆ ಕನಿಷ್ಠ 45 ಶೇ. ಅಂಕಗಳೊಂದಿಗೆ ಹೈಯರ್ ಸೆಕೆಂಡರಿ ಪೂರೈಸಿರಬೇಕು, ಎಸ್ಸಿ ಎಸ್ಟಿಗಾದರೆ ಶೇ.40 ಅಂಕಗಳು ಸಾಕು. ಹೆವಿವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಆಯ್ಕೆಯ ವಿಧಾನವು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ, ದೈಹಿಕ ಪರೀಕ್ಷೆ (ಚಾಲನಾ ಪರೀಕ್ಷೆ)ಯನ್ನು ಒಳಗೊಂಡಿರುತ್ತದೆ.