ಗ್ರಾಹರಿಂದ ವಸೂಲಿ ಮಾಡುವ ʼಸರ್ವೀಸ್ ಚಾರ್ಜ್ʼ ಈ ಕೆಲಸಕ್ಕೆ ಬಳಸುತ್ತಿತ್ತಂತೆ ಕೆಫೆ…! 09-07-2022 10:57AM IST / No Comments / Posted In: Karnataka, Latest News, Live News ಹೋಟೆಲ್ಗಳು ಹೆಚ್ಚುವರಿಯಾಗಿ ಗ್ರಾಹಕರಿಂದ ಸೇವಾ ಶುಲ್ಕ ಪಡೆಯುವಂತಿಲ್ಲ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಆದೇಶ ಹೊರಡಿಸಿದೆ. ಈ ಬಗ್ಗೆ ಸಾರ್ವಜನಿಕ ವಲಯ, ಹೋಟೆಲ್ ಉದ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಹೋಟೆಲ್ ಉದ್ಯಮ ಮಾತ್ರ ಪ್ರತಿ ಗ್ರಾಹಕನಿಂದ ಸೇವಾ ಶುಲ್ಕ ವಸೂಲಿ ಮಾಡುವುದು ಅಕ್ರಮವಲ್ಲ ಎಂದು ವಾದಿಸುತ್ತಿದೆ. ಈ ನಡುವೆ ಬೆಂಗಳೂರಿನ ಇಂದಿರಾ ನಗರ ಸೋಶಿಯಲ್ ಕೆಫೆ ತಾನು ಪ್ರತಿ ಟೇಬಲ್ನಲ್ಲಿ ಸೇವಾ ಶುಲ್ಕದ ಕುರಿತು ಸೂಚನೆಯನ್ನು ಹಾಕಿ ಗಮನ ಸೆಳೆಯುತ್ತಿದೆ. ಇದೇ ಚಿತ್ರವನ್ನು ರೆಡ್ಡಿಟ್ನಲ್ಲಿ ಅಪ್ಲೋಡ್ ಮಾಡಿದ್ದು ಚರ್ಚೆಗೆ ಕಾರಣವಾಗಿದೆ, ಸೇವಾ ಶುಲ್ಕವನ್ನು ಸ್ಥಳದಲ್ಲಿ ಊಟ ತಿಂಡಿ ಮಾಡುವ ಗ್ರಾಹಕರಿಂದ ಪಡೆಯಲಾಗುತ್ತಿದೆಯೇ ಹೊರತು ಟೇಕ್ಔಟ್ಗಳು ಮತ್ತು ಹೋಮ್ ಡೆಲಿವರಿಗಳ ಮೇಲೆ ಅಲ್ಲ ಎಂದು ರೆಸ್ಟೋರೆಂಟ್ ಹೇಳಿಕೊಂಡಿದೆ. ಅಲ್ಲದೇ ಈ ಸೇವಾ ಶುಲ್ಕವು ಸಿಬ್ಬಂದಿಯ ʼಮಕ್ಕಳ ಶಿಕ್ಷಣ’ ಕ್ಕೆ ಪಾವತಿಸಲಾಗುತ್ತದೆ ಎಂದು ಕೆಫೆ ಹೇಳಿಕೊಂಡಿದೆ. ಸೇವಾ ಶುಲ್ಕವು “ಟಿಪ್” ಅಥವಾ “ಕಾನೂನುಬಾಹಿರ” ಅಲ್ಲ ಎಂದು ಅವರು ತಿಳಿಸಲು ಪ್ರಯತ್ನಿಸಿದ್ದಾರೆ. ಗ್ರ್ರಾಹಕರು ನೀಡುವ ಸೇವಾ ಶುಲ್ಕವು ನಮ್ಮ ತಂಡದ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ನಮ್ಮಲ್ಲಿ ಟಿಪ್ಸ್ ಕೇಳುವುದಿಲ್ಲ, ಟಿಪ್ಸ್ ನೀಡಲು ಸ್ವಾಗತವಿದೆ ಎಂದು ಬೋರ್ಡ್ನಲ್ಲಿ ಬರೆಯಲಾಗಿದೆ. ಜಾಲತಾಣದಲ್ಲಿ ಅನೇಕರು ಕಾಮೆಂಟ್ ವಿಭಾಗದಲ್ಲಿ ಅಭಿಪ್ರಾಯ ದಾಖಲಿಸಿದ್ದಾರೆ. ಒಬ್ಬರು ರೆಸ್ಟೋರೆಂಟ್ ತಪ್ಪಿತಸ್ಥರೆಂದು ಕರೆದರೆ ಇನ್ನೊಬ್ಬರು ತಮಗಾದ ಅನುಭವವದ ದೊಡ್ಡ ಕತೆಯನ್ನೇ ಬರೆದುಕೊಂಡಿದ್ದಾರೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳು ಬಿಲ್ಗಳಲ್ಲಿ ಸೇವಾ ಶುಲ್ಕ ವಿಧಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಘೋಷಿಸಿತು. ಆದರೆ ಬುಧವಾರ, ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ರೆಸ್ಟೋರೆಂಟ್ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸುವುದು “ಕಾನೂನುಬಾಹಿರವಲ್ಲ’ ಎಂದು ಪ್ರಕಟಿಸಿದೆ. Service charge “rules” in Socials Indiranagar byu/yeetesh inbangalore