ಸೋಶಿಯಲ್ ಮೀಡಿಯಾದಲ್ಲಿ ಮುಂಬೈ ಪೊಲೀಸರು ಪೋಸ್ಟ್ ಮಾಡುವ ಕೆಲವೊಂದು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಈ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಮುಂಬೈ ಪೊಲೀಸರು ಸಖತ್ ಫೇಮಸ್ ಆಗಿದ್ದಾರೆ. ಫನ್ನಿ ವಿಡಿಯೋಗಳ ಮೂಲಕ ಜನರಿಗೆ ನಗಿಸುವುದು ಮಾತ್ರವಲ್ಲದೇ ಅದರ ಜೊತೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮುಂಬೈ ಪೊಲೀಸ್ ಇಲಾಖೆಯ ಸೋಶಿಯಲ್ ಮೀಡಿಯಾ ಖಾತೆಗಳು ಮಾಡುತ್ತಿವೆ. ಅದೇ ರೀತಿ ಇತ್ತೀಚಿಗೆ ಪೋಸ್ಟ್ ಮಾಡಲಾದ ವಿಡಿಯೋವೊಂದು ಟ್ವಿಟರ್ನಲ್ಲಿ ವೈರಲ್ ಆಗಿದೆ.
ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾದ ವಿಡಿಯೋ ಇದಾಗಿದ್ದು ಇದರಲ್ಲಿ ಬಸ್ನಲ್ಲಿ ಕುಳಿತು ಇಬ್ಬರು ವೃದ್ಧರು ಸೀಟಿನಲ್ಲಿ ತನಗೆ ಹೆಚ್ಚು ಜಾಗ ಬೇಕು, ತನಗೆ ಹೆಚ್ಚು ಜಾಗ ಬೇಕು ಎಂದು ಜಗಳವಾಡಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ದೂಡಿಕೊಂಡು ವೃದ್ದರು ಜಗಳವಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋ ಶೇರ್ ಮಾಡಿರುವ ಮುಂಬೈ ಪೊಲೀಸ್ ಇಲಾಖೆಯು ದ್ವಿಚಕ್ರ ವಾಹನದಲ್ಲಿ ಮೂರನೇ ವ್ಯಕ್ತಿಗೆ ಸ್ಥಳಾವಕಾಶ ಇರೋದಿಲ್ಲ ಎಂದು ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮುಂಬೈ ಪೊಲೀಸ್ ಇಲಾಖೆಯ ಬುದ್ಧಿವಂತಿಕೆಗೆ ಶಹಬ್ಬಾಸ್ ಅಂತಿದ್ದಾರೆ.
https://youtu.be/Kh4IGCjtdO8