ಈ ಬಾರಿಯ ಐಪಿಎಲ್ನಿಂದ ದಿನೇಶ್ ಕಾರ್ತಿಕ್ ಬಗ್ಗೆ ಹೊಸ ಕ್ರೇಜ್ ಸೃಷ್ಟಿಯಾಗಿದೆ. ಇನ್ನಿಂಗ್ಸ್ ಕೊನೆಯಲ್ಲಿ ಅವರ ಹೊಡಿಬಡಿಯ ಫಿನಿಶಿಂಗ್ ಟಚ್ ಕ್ರಿಕೆಟ್ ಪ್ರೇಮಿಗಳಲ್ಲಿ ಅಭಿಮಾನ ಹೆಚ್ಚಿಸಿದೆ. ಅಷ್ಟೇ ಅಲ್ಲದೇ ದಿನೇಶ್ ಕಾರ್ತಿಕ್ ಇಂಡಿಯಾ ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಮುನ್ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಅವರ ಅಭಿಮಾನಿಯೊಬ್ಬ ರೂಬಿಕ್ಸ್ ಕ್ಯೂಬ್ ಬಳಸಿ ಅವರ ಭಾವಚಿತ್ರವನ್ನು ಸಿದ್ಧಪಡಿಸಿ ಸಂಭ್ರಮಿಸಿದ್ದಾರೆ. ಬೃಹತ್ ಭಾವಚಿತ್ರವು ಸ್ವತಃ ಕ್ರಿಕೆಟಿಗರು ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಶ್ಲಾಘನೆ ಗಳಿಸಿದೆ.
ಜುಲೈ 1 ರಂದು ಡಬಿರ್ಶೈರ್ ವಿರುದ್ಧದ ಅಭ್ಯಾಸ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್ಬ್ಯಾಟ್ಸ್ಮನ್ ಕಾರ್ತಿಕ್ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದರು. ಅವರನ್ನು ಅಭಿನಂದಿಸಲು, ಮೊಸಾಯಿಕ್ ಕಲಾವಿದ ಮತ್ತು ಸ್ಪೀಡ್ಕ್ಯೂಬರ್ ಪೃತ್ವೀಶ್ 600 ರೂಬಿಕ್ಸ್ ಬಳಸಿ ಕ್ರಿಕೆಟಿಗನ ಭಾವಚಿತ್ರವನ್ನು ರಚಿಸಿದ್ದಾರೆ. ಭಾವಚಿತ್ರವನ್ನು ರಚಿಸುತ್ತಿರುವ ವೀಡಿಯೊವನ್ನು ಪೃಥ್ವೀಶ್ ಸೋಮವಾರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊ 86,000ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, 18,000ಕ್ಕೂ ಹೆಚ್ಚು ಲೈಕ್ ಪಡೆದಿದೆ. ದಿನೇಶ್ ಕಾತಿರ್ಕ್ ಅಭಿಮಾನಿಗಳು ಕಾಮೆಂಟ್ ವಿಭಾಗವನ್ನು ಪ್ರಶಂಸೆ ಮತ್ತು ಶುಭಾಶಯಗಳೊಂದಿಗೆ ತುಂಬಿಸಿಬಿಟ್ಟಿದ್ದಾರೆ. ಕಾರ್ತಿಕ್ ಕೂಡ ಪೋಸ್ಟ್ಗೆ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
2004 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಕಾರ್ತಿಕ್ 26 ಟೆಸ್ಟ್, 94 ಸೀಮಿತ ಓವರ್ ಪಂದ್ಯ ಮತ್ತು 39 ಟಿ20 ಪಂದ್ಯಗಳನ್ನು ಆಡಿದ್ದಾರೆ.