alex Certify ಒಟಿಪಿ ಕೇಳುವ ವಂಚಕರಿಗೆ ಅಸ್ಸಾಂ ಪೊಲೀಸರಿಂದ ಕೂಲ್ ಕೂಲ್ ಎಚ್ಚರಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಟಿಪಿ ಕೇಳುವ ವಂಚಕರಿಗೆ ಅಸ್ಸಾಂ ಪೊಲೀಸರಿಂದ ಕೂಲ್ ಕೂಲ್ ಎಚ್ಚರಿಕೆ…!

ಪೊಲೀಸರು ಇತ್ತೀಚೆಗೆ ಕ್ರಿಯಾತ್ಮಕವಾಗಿ ಎಚ್ಚರಿಕೆ ನೀಡುವ ಸಂಪ್ರದಾಯ ಬೆಳೆಸಿಕೊಳ್ಳುತ್ತಿದ್ದಾರೆ. ಕೇವಲ ಇನ್ಫೋಗ್ರಾಫಿಕ್ಸ್​ ಬಳಸಿ ಮಾಹಿತಿ ನೀಡುವ ಬದಲು ಚಲನಚಿತ್ರದ ಡೈಲಾಗ್​ಗಳನ್ನು ಬಳಸುವುದು, ಕ್ರೀಡಾಪಟುಗಳ ಸಾಧನೆಗಳನ್ನು ಬಳಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮೆಮ್​ಗಳು, ಜೋಕ್​ಗಳನ್ನೂ ಸಹ ಬಳಸುವುದುಂಟು.

ಒಟಿಪಿ ಕೇಳುವ ವಂಚಕರು ಹೆಚ್ಚುತ್ತಿರುವ ಸಂದರ್ಭದಲ್ಲಿ ಅಸ್ಸಾಂ ಪೊಲೀಸರು ಜಾಗೃತಿಗಾಗಿ ಇಂಡಿಯನ್​ ರ್ಯಾಪರ್​ ಬಾಬಾ ಸೆಹಗಲ್​ ಅವರನ್ನು ಬಳಸಿಕೊಂಡಿದ್ದಾರೆ.

ಹರ್ಜೀತ್​ ಸಿಂಗ್​ ಸೆಹಗಲ್, ಬಾಬಾ ಸೆಹಗಲ್​ ಎಂದೇ ಜನಪ್ರಿಯರಾಗಿದ್ದಾರೆ. ಈ ಕಲಾವಿದ ಆಕರ್ಷಕ ಪ್ರಾಸಗಳು ಮತ್ತು ಜಿಂಗಲ್​ಗಳಿಗೆ ಹೆಸರುವಾಸಿ.

ಬಿರಿಯಾನಿ, ಚಾಯ್​, ಟೊಮೇಟೊ ಕೆಚಪ್​ ಮತ್ತು ಆಹಾರಗಳಿಗೆ ಸಂಬಂಧಪಟ್ಟ ಹಾಡುಗಳನ್ನು ರಚಿಸುವುದರಲ್ಲೇ ಖ್ಯಾತರು. ಅವರ ಸಾಹಿತ್ಯವನ್ನು ಸಾಮಾನ್ಯವಾಗಿ ಸಿಲ್ಲಿ ಸಿಲ್ಲಿ ಎಂದು ಕರೆಯುತ್ತಾರೆ. ಆದರೂ ಅಸ್ಸಾಂನ ಪೋಲೀಸ್​ ಪಡೆ ಮೋಸಗಾರರ ವಿರುದ್ಧ ಜನರನ್ನು ಎಚ್ಚರಿಸಲು ಇವರ ಕಂಟೆಂಟ್​ ಬಳಸಿ ಗಮನ ಸೆಳೆದಿದ್ದಾರೆ.

ವಂಚಕರು ಒಟಿಪಿ ಕೇಳಿದಾಗ ಯಾವ ರೀತಿ ಉತ್ತರಿಸಬೇಕೆಂದು ರ್ಯಾಒರ್ ಹಾಡಿನ ತುಣುಕು ಬಳಸಲಾಗಿದೆ.

ಇತ್ತೀಚಿನ ಸಾರ್ವಜನಿಕ ಸೇವಾ ಪ್ರಕಟಣೆಯಲ್ಲಿ, ರ್ಯಾಪರ್​ ಹಾಡಿನ ಜೊತೆಗೆ “ಸ್ಕಾಮರ್ಸ್​ ಕೊ ಕರ್ದೊ ತುಮ್​ ಕನ್ಫ್ಯೂಸ್​; ಒಟಿಪಿ ಶೇರ್​ ಕರ್ನೆ ಸೆ ಕರ್​ ದೊ ರಿಫ್ಯೂಸ್​’ ಎಂದು ಪೊಲೀಸರು ಎಚ್ಚರಿಕೆ ಸಂದೇಶದೊಂದಿಗೆ, ಥಿಂಕ್ ಬಿಫೋರ್ ಯು ಶೇರ್ ಹ್ಯಾಶ್​ಟ್ಯಾಗ್​ನೊಂದಿಗೆ ಪೋಸ್ಟ್​ ಮಾಡಿದೆ. ಜತೆಗೆ ರ್ಯಾಪರ್​ನನ್ನೂ ಕೂಡ ಟ್ಯಾಗ್​ ಮಾಡಿದೆ. ಅಸ್ಸಾಂ ಎಡಿಜಿಪಿ ಕೂಡ ಈ ಕ್ರಿಯಾಶೀಲ ಪೋಸ್ಟ್​ ಹಂಚಿಕೊಂಡಿದ್ದು, ಟ್ವೀಟ್​ ಮಾಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...