ಬೆಂಗಳೂರು: ಮೈಕ್ರೋ ಲ್ಯಾಬ್ಸ್ ಪ್ರೈ ಲಿ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದೇಶದ 40 ಕಡೆಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮೈಕ್ರೋ ಲ್ಯಾಬ್ಸ್ ಪ್ರೈ.ಲಿ. ಡೋಲೋ 650 ಮಾತ್ರೆ ತಯಾರಿಕಾ ಕಂಪನಿಯಾಗಿದ್ದು, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೇಂದ್ರ ಕಚೇರಿ ಸೇರಿದಂತೆ ತಮಿಳುನಾಡು, ಗೋವಾ, ಪಂಜಾಬ್, ಮುಂಬೈ, ದೆಹಲಿ ಸೇರಿದಂತೆ ದೇಶದ 40 ಕಡೆಗಳಲ್ಲಿ ಇರುವ ಶಾಖೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಂಪನಿಯ ಸಿಎಂಡಿ ದಿಲೀಪ್ ಸುರಾನಾ, ಡೈರೆಕ್ಟರ್ ಆನಂದ್ ಸುರಾನಾ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, 25ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಕೋವಿಡ್ ಸಮಯದಲ್ಲಿ ಮೈಕ್ರೋ ಲ್ಯಾಬ್ಸ್ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸಿತ್ತಲ್ಲದೇ ಡೋಲೊ 650 ಮಾತ್ರೆ ದೇಶದಲ್ಲಿಯೇ ಅತಿ ಹೆಚ್ಚು ಮಾರಾಟವಾಗಿತ್ತು. ಕಂಪನಿ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿಬಂದಿದೆ.