alex Certify BIG NEWS: ಡೋಲೋ 650 ಮಾತ್ರೆ ತಯಾರಿಕಾ ಲ್ಯಾಬ್ ಗೆ IT ಶಾಕ್; ಮೈಕ್ರೋ ಲ್ಯಾಬ್ಸ್ ಪ್ರೈ ಲಿ. ಕಂಪನಿಯ 40 ಸ್ಥಳಗಳಲ್ಲಿ ತೆರಿಗೆ ಅಧಿಕಾರಿಗಳ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡೋಲೋ 650 ಮಾತ್ರೆ ತಯಾರಿಕಾ ಲ್ಯಾಬ್ ಗೆ IT ಶಾಕ್; ಮೈಕ್ರೋ ಲ್ಯಾಬ್ಸ್ ಪ್ರೈ ಲಿ. ಕಂಪನಿಯ 40 ಸ್ಥಳಗಳಲ್ಲಿ ತೆರಿಗೆ ಅಧಿಕಾರಿಗಳ ದಾಳಿ

ತೆರಿಗೆ ವಂಚನೆ ಆರೋಪ: ನ್ಯೂಸ್ ಕ್ಲಿಕ್, ನ್ಯೂಸ್ ಲಾಂಡ್ರಿ ಕಚೇರಿಯಲ್ಲಿ ಐಟಿ 'ಪರಿಶೀಲನೆ' | Income Tax departmentconducted separate survey operations at premises of Newsclick and Newslaundry | TV9 Kannada

ಬೆಂಗಳೂರು: ಮೈಕ್ರೋ ಲ್ಯಾಬ್ಸ್ ಪ್ರೈ ಲಿ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದೇಶದ 40 ಕಡೆಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಮೈಕ್ರೋ ಲ್ಯಾಬ್ಸ್ ಪ್ರೈ.ಲಿ. ಡೋಲೋ 650 ಮಾತ್ರೆ ತಯಾರಿಕಾ ಕಂಪನಿಯಾಗಿದ್ದು, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೇಂದ್ರ ಕಚೇರಿ ಸೇರಿದಂತೆ ತಮಿಳುನಾಡು, ಗೋವಾ, ಪಂಜಾಬ್, ಮುಂಬೈ, ದೆಹಲಿ ಸೇರಿದಂತೆ ದೇಶದ 40 ಕಡೆಗಳಲ್ಲಿ ಇರುವ ಶಾಖೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಂಪನಿಯ ಸಿಎಂಡಿ ದಿಲೀಪ್ ಸುರಾನಾ, ಡೈರೆಕ್ಟರ್ ಆನಂದ್ ಸುರಾನಾ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, 25ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಕೋವಿಡ್ ಸಮಯದಲ್ಲಿ ಮೈಕ್ರೋ ಲ್ಯಾಬ್ಸ್ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸಿತ್ತಲ್ಲದೇ ಡೋಲೊ 650 ಮಾತ್ರೆ ದೇಶದಲ್ಲಿಯೇ ಅತಿ ಹೆಚ್ಚು ಮಾರಾಟವಾಗಿತ್ತು. ಕಂಪನಿ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...