ಕೋಲ್ಕತ್ತಾದ ಸಲಿಂಗಕಾಮಿ ಜೋಡಿ ಭಾನುವಾರ ವಿವಾಹವಾಗಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ ಪ್ರಸಂಗ ಕೊಲ್ಕೊತ್ತಾದಲ್ಲಿ ನಡೆದಿದೆ.
ಅವರ ವಿವಾಹ ಸಮಾರಂಭದಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು. ಅಭಿಷೇಕ್ ರೇ ಮತ್ತು ಚೈತನ್ಯ ಶರ್ಮಾ ವಿವಾಹವಾದವರು. ಅವರ ಮದುವೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಜೀವವನ್ನೇ ಪಣಕ್ಕಿಟ್ಟು ವ್ಯಕ್ತಿಯನ್ನು ಕಾಪಾಡಿದ ಪೊಲೀಸ್ ಪೇದೆ: ನೆಟ್ಟಿಗರಿಂದ ಶ್ಲಾಘನೆ
ದಂಪತಿ ಅರಿಷಿಣ ಶಾಸ್ತ್ರ ಮತ್ತು ವಿವಾಹ ಸಮಾರಂಭಗಳ ಚಿತ್ರಗಳು ಮತ್ತು ವಿಡಿಯೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಅಭಿಷೇಕ್ ಧೋತಿ ಮತ್ತು ಕುರ್ತಾದಲ್ಲಿ ಸಾಂಪ್ರದಾಯಿಕ ಬಂಗಾಳಿ ವರನಂತೆ ಕಾಣಿಸಿಕೊಂಡರೆ, ಚೈತನ್ಯ ಶೆರ್ವಾನಿ ಧರಿಸಿದ್ದರು. ಸಮಾರಂಭದಲ್ಲಿ ಖುಷಿ, ಸಂಭ್ರಮ ಎದ್ದು ಕಾಣಿಸಿದೆ. ಕುಟುಂಬಸ್ಥರು, ಸ್ನೇಹಿತರು ಸಡಗರದಲ್ಲಿರುವುದೂ ಸಹ ಫೋಟೋದಲ್ಲಿ ಕಾಣಿಸಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ, ಸಲಿಂಗಕಾಮಿ ದಂಪತಿ ಹೈದರಾಬಾದ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ದಂಗ್ ಹೈದ್ರಾಬಾದ್ನ ಹೊರವಲಯದಲ್ಲಿರುವ ರೆಸಾರ್ಟ್ನಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು.