ಜ್ಯೋತಿಷ್ಯದಲ್ಲಿ ಮನುಷ್ಯನಿಗೆ ಸಂಬಂಧಿಸಿದ ಪ್ರತಿಯೊಂದು ವಿಷ್ಯಗಳ ಬಗ್ಗೆ ಹೇಳಲಾಗಿದೆ. ಶಾರೀರಿಕ ಸಂಬಂಧದ ಬಗ್ಗೆಯೂ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಯಾವ ಸಮಯದಲ್ಲಿ ಸಂಬಂಧ ಬೆಳೆಸಬಾರದು ಎಂಬುದರಿಂದ ಹಿಡಿದು ಯಾವ ಸ್ಥಳದಲ್ಲಿ ಸಂಬಂಧ ಬೆಳೆಸಬಾರದು ಎನ್ನುವವರೆಗೆ ಎಲ್ಲವನ್ನೂ ಗ್ರಂಥದಲ್ಲಿ ಹೇಳಲಾಗಿದೆ.
ಯಾವುದೇ ನದಿ ದಂಡೆ ಮೇಲೆ ಅಥವಾ ನದಿ ಬಳಿ ಶಾರೀರಿಕ ಸಂಬಂಧ ಬೆಳೆಸಬಾರದು. ನೀರಿನ ಝುಳು ಝುಳು ಶಬ್ಧವನ್ನು ದಂಪತಿ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕೇಳಬಾರದು ಎಂದು ಗ್ರಂಥದಲ್ಲಿ ಹೇಳಲಾಗಿದೆ.
ಧಾರ್ಮಿಕ ನಂಬಿಕೆ ಪ್ರಕಾರ ಧಾರ್ಮಿಕ ಕಾರ್ಯಕ್ಕಾಗಿ ಹಾಕಿದ ಅಗ್ನಿ ಮುಂದೆ ಶಾರೀರಿಕ ಸಂಬಂಧ ಬೆಳೆಸಬಾರದು.
ಸ್ಮಶಾನದಲ್ಲಿ ಅಥವಾ ಶವದ ಆಸುಪಾಸು ಸಂಬಂಧ ಬೆಳೆಸಬಾರದು. ಶವವನ್ನು ಇರಿಸಿದ ಮನೆಯಲ್ಲಿ ಅಥವಾ ಮಹಡಿಯಲ್ಲಿ ಸಂಬಂಧ ಬೆಳೆಸುವುದು ನಿಷಿದ್ಧ.
ಮಕ್ಕಳು ಅಥವಾ ಶಿಶುಗಳ ಎದುರಲ್ಲಿ ಸಂಬಂಧ ಬೆಳೆಸುವುದು ಪಾಪಕ್ಕೆ ಸಮಾನ.
ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಆಸುಪಾಸು ಅಥವಾ ಸಾವಿಗೆ ಹತ್ತಿರವಾಗುತ್ತಿರುವ ವ್ಯಕ್ತಿ ಆಸುಪಾಸು ಸಂಬಂಧ ಬೆಳೆಸುವುದು ಶುಭವಲ್ಲ.
ಸಂಬಂಧಿಕರು ಅಥವಾ ಸ್ನೇಹಿತರ ಮನೆಯಲ್ಲಿ ಶಾರೀರಿಕ ಸಂಬಂಧ ಬೆಳೆಸುವುದು ಕೂಡ ಶಾಸ್ತ್ರದ ಪ್ರಕಾರ ನಿಷಿದ್ಧ.
ಪೂಜಾರಿ, ಸಂತ, ಸನ್ಯಾಸಿ, ಧಾರ್ಮಿಕ ಕಾರ್ಯಗಳನ್ನು ಮಾಡುವ ವ್ಯಕ್ತಿ ಹತ್ತಿರವಿರುವಾಗ ಸಂಬಂಧ ಬೆಳೆಸುವುದು ಸೂಕ್ತವಲ್ಲ.