alex Certify ತಾಜ್​ ಮಹಲ್​ ಪ್ಲಾಸ್ಟಿಕ್​​ ಮುಕ್ತ ಮಾಡಿದೆ ಆ ಒಂದು ಫೋಟೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಜ್​ ಮಹಲ್​ ಪ್ಲಾಸ್ಟಿಕ್​​ ಮುಕ್ತ ಮಾಡಿದೆ ಆ ಒಂದು ಫೋಟೋ….!

ಸೋಶಿಯಲ್ ಮೀಡಿಯಾದಲ್ಲಿ ತುಂಬಾ ದಿನಗಳಿಂದ ಟ್ರೆಂಡ್​ನಲ್ಲಿದೆ ಆಫ್ಟರ್, ಬಿಫೋರ್ ಅನ್ನೋ ಫೋಟೋಗಳು. ಹತ್ತು ವರ್ಷದ ಹಿಂದೆ ಮತ್ತು ಈಗಾಗಿರುವ ಬದಲಾವಣೆ, ಇವೆರಡನ್ನೂ ಕೊಲಾಜ್ ಮಾಡಿ ಫೋಟೋಗಳನ್ನ ಅಪ್ಲೋಡ್​ ಮಾಡಲಾಗುತ್ತೆ. ಈ ಟ್ರೆಂಡ್ ಸೆಟ್ಟಿಂಗ್ ಕೊಲ್ಯಾಜ್ ಫೋಟೋದಲ್ಲಿ ಹೆಚ್ಚಾಗಿ ಜನರು ತಾವು ಬಾಲ್ಯದಲ್ಲಿ ತೆಗೆಸಿಕೊಂಡಿದ್ದ ಫೋಟೋ ರೀತಿಯಲ್ಲಿಯೇ, ಈಗ ಮತ್ತೆ ಮರುಸೃಷ್ಟಿ ಮಾಡಿ ಪೋಸ್ ಕೊಟ್ಟು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈಗ ಓರ್ವ ಸಾಮಾಜಿಕ ಕಾರ್ಯಕರ್ತೆ ತಾಜ್​ಮಹಲ್​ 10 ವರ್ಷದ ಹಿಂದಿನ ಮತ್ತು ಇತ್ತೀಚೆಗಿನ ಫೋಟೋವನ್ನ ಅಪ್ಲೋಡ್ ಮಾಡಿದ್ದಾರೆ.

ಇವರ ಹೆಸರು ಲಿಸಿಪ್ರಿಯಾ ಕಂಗುಜಮ್. ಇವರು ಓರ್ವ ಹವಾಮಾನ ವಿಶೇಷಜ್ಞೆ. ಇತ್ತೀಚೆಗೆ ಇವರು ತಾಜ್​​ಮಹಲ್​ ಎದುರು ನಿಂತಿರುವ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ, ಜೊತೆಗೆ ಹತ್ತು ವರ್ಷದ ಹಿಂದೆ ಅದೇ ಜಾಗದಲ್ಲಿ ನಿಂತಿದ್ದ ಫೋಟೋವನ್ನ ಕೂಡಾ ಹಾಕಿದ್ದಾರೆ. ಅಂದು ಪ್ಲಾಸ್ಟಿಕ್, ಕಸಕಡ್ಡಿಗಳಿಂದ ತುಂಬಿ ಹೋಗಿದ್ದ ಜಾಗ, ಇಂದು ಎಷ್ಟು ಸ್ವಚ್ಛವಾಗಿದೆ ಅನ್ನುವುದು ಈ ಫೋಟೋದಲ್ಲಿ ಸ್ಷಷ್ಟವಾಗಿ ಗೊತ್ತಾಗುತ್ತಿತ್ತು. ಅಂದು ಇದೇ ಜಾಗದಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಪರಿಸರ ಮಾಲಿನ್ಯದ ಕುರಿತು ಫಲಕ ಹಿಡಿದು ಎಲ್ಲರ ಗಮನ ಸೆಳೆದಿದ್ದರು ಲಿಸಿಪ್ರಿಯಾ. ಆ ಫೋಟೋ ವೈರಲ್ ಆಗಿತ್ತು. ಇಂದು ಅದರ ಎಫೆಕ್ಟ್ ಆ ಪ್ರದೇಶದಲ್ಲಿ ಪ್ಲಾಸ್ಟಿಕ್ ಮುಕ್ತವಾಗಿರುವುದನ್ನ ನೋಡಬಹುದಾಗಿದೆ.

BIG NEWS: ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ ನಟಿ ಪವಿತ್ರ ಲೋಕೇಶ್

ಲಿಸಿಪ್ರಿಯಾ ಕಂಗುಜಮ್ ಹತ್ತು ವರ್ಷದ ಹಿಂದೆ ತಾಜ್​ಮಹಲ್​ ಮುಂದೆ ನಿಂತು ಬೋರ್ಡ್ ಹಿಡಿದು ಫೋಟೋ ತೆಗೆದ ಸೋಶಿಯಲ್ ಮೀಡಿಯಾದಲ್ಲಿ ಅಲ್ಲೋಡ್ ಮಾಡಿದಾಗ ಆ ಫೋಟೋ ಎಲ್ಲರ ಗಮನ ಸೆಳೆದಿತ್ತು. ಅದರಲ್ಲಿ “ತಾಜ್​ಮಹಲ್​ ಸೌಂದರ್ಯ ಹಿಂದಿರುವ ಇನ್ನೊಂದು ಮುಖ, ಪ್ಲಾಸ್ಟಿಕ್ ಕಸದಿಂದ ತುಂಬಿರುವ ಪ್ರದೇಶ“ ಅನ್ನುವ ಅರ್ಥದಲ್ಲಿ ಫೋಟೋ ಹಾಕಲಾಗಿತ್ತು. ಇದಕ್ಕೆ ಸಮಾಜವಾದಿ ಪಕ್ಷದ ನಾಯಕ ಮನೀಷ್ ಜಗನ್ ಅಗರವಾಲ್ “ ಉತ್ತರಪ್ರದೇಶವನ್ನ ಟೀಕಿಸುತ್ತಿರುವ ವಿದೇಶಿ ಪ್ರವಾಸಿ“ ಅಂತ ಟ್ವಿಟರ್​​ನಲ್ಲಿ ಕಾಮೆಂಟ್ ಹಾಕಿದ್ದರು. ಈ ಚಿತ್ರ ವೈರಲ್ ಆಗುತ್ತಿದ್ದ ಹಾಗೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ತಕ್ಷಣ ಆ ಪ್ರದೇಶವನ್ನ ಸ್ವಚ್ಛಗೊಳಿಸಿದ್ದಾರೆ.

ರಾಜಕೀಯ ನಾಯಕ ಅಗರ್ವಾಲ್ ಸೇರಿದಂತೆ, ಕೆಲ ರಾಜಕಾರಣಿಗಳು ಪದೇ ಪದೇ `ವಿದೇಶಿ` ಅನ್ನೋ ಅರ್ಥದಲ್ಲಿ ಕಾಮೆಂಟ್ ಹಾಕಿದ್ದ ಕಾರಣ, ಲಿಸಿಪ್ರಿಯಾ ಕಂಗುಜಮ್ ಅದನ್ನ ಖಂಡಿಸಿ ಟ್ವೀಟ್ ಮಾಡಿದ್ದಾರೆ. “ನಾನು ಭಾರತೀಯಳು ಅನ್ನೋ ಹೆಮ್ಮೆ ಇದೆ. ಈಶಾನ್ಯ ಜನರ ಬಗ್ಗೆ ಜನಾಂಗೀಯ ಮನೋಭಾವವನ್ನು ನಿಲ್ಲಿಸಿ. “ ಅಂತ ಹೇಳಿದ್ದಾರೆ. “ ಸರ್ ನಾನು 8ನೇ ಬಾರಿ ವಿಶ್ವಸಂಸ್ಥೆಯಲ್ಲಿ ಭಾರತವನ್ನ ಪ್ರತಿನಿಧಿಸಿದ್ದೇನೆ. ಇಂತಹ ಜನಾಂಗೀಯ ಧೋರಣೆಯನ್ನ ನಿಲ್ಲಿಸಿ. ಎಂದು ಲಿಸಿಪ್ರಿಯಾ ಕಂಗುಜಮ್ ಟ್ವೀಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...