ವೃತ್ತಿಪರ ಮೀನುಗಾರ ಜೇಸನ್ ಮೋಯ್ಸ್ ಅವರು ಆಸ್ಟ್ರೇಲಿಯಾದ ಆಳವಾದ ನೀರಿನಲ್ಲಿ ಅಪರಿಚಿತ ಜೀವಿಯೊಂದನ್ನು ಕಂಡುಹಿಡಿದಿದ್ದಾರೆ, ಇದನ್ನು ಕೊಳಕು ಎಂದು ಕರೆಯಲಾಗಿದೆ.
ಟ್ರಾಪ್ಮ್ಯಾನ್ ಬೆರ್ಮಗುಯ್ ಎಂಬ ಹೆಸರಿನ ತನ್ನ ಫೇಸ್ಬುಕ್ ಖಾತೆಯಲ್ಲಿ ಚಿತ್ರವನ್ನು ಜೇಸನ್ ಹಂಚಿಕೊಂಡಿದ್ದಾರೆ. ಈ ನಿಗೂಢ ಜೀವಿಯನ್ನು ಬರ್ಮಗುಯಿ ಪಟ್ಟಣದ ಕರಾವಳಿಯಲ್ಲಿ ರೀಲ್ ಮಾಡಿದ್ದಾಗಿ ಅವರು ಬಹಿರಂಗಪಡಿಸಿದರು. ಇದನ್ನು ತನ್ನ ಜೀವನದಲ್ಲಿ ನೋಡಿದ ಅತ್ಯಂತ ಕುರೂಪಿ ಮೀನು ಎಂದು ಕರೆದ ಜೇಸನ್, ಇದು ಬ್ಲಾಬ್ಫಿಶ್ ಎಂದು ಊಹಿಸಿದ್ದಾನೆ. ಅಲ್ಲದೆ ಅದು ರುಚಿಯಾಗಿರಬಹುದು ಅಂತಾ ಕೂಡ ಭಾವಿಸಿದ್ದಾನೆ.
ಪ್ರವಾಸಿಗರೇ ಗಮನಿಸಿ: ಸಕ್ರೆಬೈಲು ತುಂಗಾ ನದಿ ಹಿನ್ನೀರಿನಲ್ಲಿ ಬೋಟಿಂಗ್ ಪುನರಾರಂಭ
ಬೆರ್ಮಗುಯಿಯಿಂದ ಪೂರ್ವಕ್ಕೆ ಆಳವಾದ ನೀರಿನಲ್ಲಿ ಈ ಮೀನು ಸಿಕ್ಕಿಬಿದ್ದಿದೆ. ಬಹುಶಃ ತಾನು ನೋಡಿದ ಅತ್ಯಂತ ಕೊಳಕು ಮೀನು ಎಂದು ಹೇಳಿ ಚಿತ್ರವನ್ನು ಪೋಸ್ಟ್ ಮಾಡಿದ್ದಾನೆ. ಚಿತ್ರದಲ್ಲಿ ಜೀವಿಯು ಗುಲಾಬಿ ಮತ್ತು ಬೂದು ಬಣ್ಣದಲ್ಲಿರುವುದನ್ನು ಗಮನಿಸಬಹುದು. ಅದರ ಕಣ್ಣುಗಳು ಅದರ ತಲೆಯ ಹೊರಗೆ ಉಬ್ಬಿ ಬಂದಿವೆ. ಅದರ ಅಗಲವಾದ ಬಾಯಿಯು ಅದರ ಮುಖದ ಹೆಚ್ಚಿನ ಭಾಗವನ್ನು ತೆಗೆದುಕೊಳ್ಳುತ್ತದೆ. ಸಣ್ಣ ಆದರೆ ಚೂಪಾದ ಸೂಜಿಯಂತಹ ಹಲ್ಲುಗಳನ್ನು ಸಾಲುಗಳಲ್ಲಿ ಒಳಗೊಂಡಿದೆ.
ಕೆಲವು ಇಂಟರ್ನೆಟ್ ಬಳಕೆದಾರರು ಇದು ಬ್ಲಾಬ್ಫಿಶ್ ಆಗಿರಬಹುದು ಎಂದು ಊಹಿಸಿದ್ದಾರೆ. ಇದು ಮಾಂಕ್ಫಿಶ್ ಅಥವಾ ಟೋಡ್ಫಿಶ್ ಆಗಿರಬಹುದು ಎಂದು ಹಲವರು ಊಹಿಸಿದ್ದಾರೆ.