ಆಘಾತಕಾರಿ ಘಟನೆಯೊಂದರಲ್ಲಿ 60 ವರ್ಷದ ವೃದ್ಧನೊಬ್ಬ ತಾನು ಸಾಕಿದ ಹೆಣ್ಣು ನಾಯಿ ಮೇಲೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದು, ಕೆಲವು ಹುಡುಗರು ಈ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹಾಕಿದ ಬಳಿಕ ಬಹಿರಂಗವಾಗಿದೆ.
ಥಾಣೆಯ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಲ್ಯಾಣಿ ಹನುಮಾನ್ ನಗರ ವಾಸಿ ವಿದ್ಯಾಸಾಗರ್ ಅಲಿಯಾಸ್ ಅಪ್ಪಾ ಎಂಬಾತ ಇಂತಹ ನೀಚ ಕೃತ್ಯವೆಸಗಿದ್ದಾನೆ. ತನ್ನ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ.
ಈ ವೃದ್ಧನ ಅಮಾನವೀಯ ಕೃತ್ಯ ಅಕ್ಕಪಕ್ಕದಲ್ಲಿಯೇ ವಾಸವಾಗಿರುವ ಹುಡುಗರ ಗಮನಕ್ಕೆ ಬಂದಿದೆ. ಅವರು ಇದನ್ನು ವಿಡಿಯೋ ಮಾಡಿ ಪ್ರಾಣಿದಯಾ ಸಂಘದ ರೇಖಾ ಎಂಬವರಿಗೆ ಕಳುಹಿಸಿದ್ದರು. ರೇಖಾ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ವೃದ್ಧನ ವಿರುದ್ಧ ಪ್ರಾಣಿಹಿಂಸೆ ಸೇರಿದಂತೆ ವಿವಿಧ ಕಲಂ ಗಳಡಿ ಪ್ರಕರಣ ದಾಖಲಿಸಿ ಆತನ ಬಂಧನಕ್ಕೆ ಮುಂದಾಗಿದ್ದಾರೆ.